ದಸರಾ ಮಹೋತ್ಸವ: ಸೈಕ್ಲೋಥಾನ್‍ಗೆ ಐಜಿಪಿ ಚಾಲನೆ
ಮೈಸೂರು,ಸೆ.27:ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಸ್ಥಿರತೆ ಸೌಹಾರ್ದತೆ ದೃಷ್ಟಿಯಿಂದ ದಸರಾ ಕ್ರೀಡಾ ಉಪಸಮಿತಿಯಿಂದ ಸೈಕ್ಲೋಥಾನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಬುಧವಾರ ಬೆಳಿಗ್ಗೆ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣ ದಲ್ಲಿ ಐಜಿಪಿ ವಿಪುಲ್ ಕುಮಾರ್ ಸೈಕ್ಲಾಥಾನ್ ಗೆ ಚಾಲನೆ ನೀಡಿದರು. ಮೈಸೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸುಮಾರು 300 ಕ್ಕೂಹೆಚ್ಚು ಸ್ಪರ್ಧಿಗಳು ಈ ಸೈಕ್ಲೋಥಾನ್ ನಲ್ಲಿ ಭಾಗಿಯಾಗಿದ್ದರು.
ಪುರುಷರಿಗೆ 100 ಕಿ.ಮೀ ಹಾಗೂ ಮಹಿಳೆಯರಿಗೆ 50 ಕಿ.ಮೀ ಎಂದು ನಿಗದಿಪಡಿಸಲಾಗಿತ್ತು. ಚಾಮುಂಡಿ ವಿಹಾರ ಕ್ರೀಡಾಂಗಣ ಬಳಿ ಆಯೋಜಿಸಲಾದ ಈ ಬಾರಿಯ ಸೈಕ್ಲೋಥಾನ್ ನಲ್ಲಿ ಪೊಲೀಸ್ ಇಲಾಖೆಯು ಪಾಲ್ಗೊಂಡಿದೆ. ಸೈಕ್ಲೋಥಾನ್ ಸ್ಪರ್ಧೆಯಲ್ಲಿ ವಿದೇಶಿಯರು ಭಾಗವಹಿಸಿದ್ದರು. ಇಂದು ಬೆಳಗ್ಗೆ ತುಂತುರು ಮಳೆ ಸುರಿಯುತ್ತಿತ್ತು. ತುಂತುರು ಮಳೆಯ ನಡುವೆಯೂ ಸೈಕ್ಲೋಥಾನ್ ಸ್ಪರ್ಧಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು.
ಈ ಸಂದರ್ಭ ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ದಸರಾ ಕ್ರೀಡಾ ಉಪಸಮಿತಿಯ ಉಪಾಧ್ಯಕ್ಷ ಸತೀಶ್, ಕ್ರೀಡಾ ಉಪನಿರ್ದೇಶಕ ಸುರೇಶ್, ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಮತ್ತಿತರರು ಉಪಸ್ಥಿತರಿದ್ದರು.
ಸೈಕ್ಲೋಥಾನ್‍ನಲ್ಲಿ ವಿಜೇತರು: ಪುರುಷರ ವಿಭಾಗದ 115 ಕೀ.ಮಿ. ರಸ್ತೆ ಸೈಕ್ಲೋಥಾನ್ ನಲ್ಲಿ ಮೈಸೂರಿನ ಎನ್.ಲೋಕೇಶ್ ಪ್ರಥಮ, ಶ್ರೀಧರ ಸವಣೂರ ದ್ವಿತೀಯ, ನಾಗಪ್ಪ ಮಾರಡಿ ತೃತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗದ 64 ಕೀ.ಮಿ. ರಸ್ತೆ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಲೀನಾ ಪ್ರಥಮ, ಸಾವಿತ್ರಿ ಹೆಬ್ಬಾಳಟ್ಟಿ ದ್ವಿತೀಯ ಪಡೆದರೆ ಸಹನಾ ಕುಟಿಗನೂರು ತೃತೀಯ ಸ್ಥಾನ ಪಡೆದರು.