varthabharthi


ಪ್ಯಾರಾ ಅಥ್ಲೆಟಿಕ್ಸ್

ಮಹಿಳಾ, ಮಕ್ಕಳ ದಸರಾ: ಬಾಲಮಂದಿರ ಮಹಿಳಾ ನಿಲಯದವರಿಂದ ನೃತ್ಯ ಪ್ರದರ್ಶನ

ವಾರ್ತಾ ಭಾರತಿ : 27 Sep, 2017

ಮೈಸೂರು,ಸೆ.27: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಸರ್ಕಾರಿ ಬಾಲಕ ಹಾಗೂ ಬಾಲಕಿಯರ ಬಾಲಮಂದಿರದ ಮಕ್ಕಳು, ರಾಜ್ಯ ಮಹಿಳಾ ನಿಲಯದ ನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.

ಜೆ.ಕೆ.ಮೈದಾನದಲ್ಲಿ ನಡೆಯಬೇಕಿದ್ದ ಈ ಸಾಂಸ್ಕೃತಿಕ ಕಾರ್ಯಕ್ರಮ ಮಳೆಯ ಅವಾಂತರದಿಂದ ಮೈಸೂರು ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಅಂತಾರಾಷ್ಟ್ರೀಯ ಯೋಗಪಟು ಹೆಚ್.ಖುಷಿ ಹಾಗೂ ಸರಿಗಮಪ ಲಿಟಲ್ ಚಾಂಪ್ಸ್ ನ ವಿನ್ನರ್  ಮೈಸೂರಿನ ಬಿ.ಆರ್.ಶ್ರೀಕರ್ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ನಂತರ ಬಾಲಕಿಯರ ಬಾಲ ಮಂದಿರದ ಮಕ್ಕಳು ಡೋಲು ಬಾಜೆ ಹಾಡಿಗೆ ನೃತ್ಯ ಪ್ರದರ್ಶನ ಮಾಡಿದರು.

ಇದೇ ಸಂದರ್ಭ ಯೋಗಪಟು ಖುಷಿ ಯೋಗ ಪ್ರದರ್ಶಿಸಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)