ಪುಸ್ತಕದಂಗಡಿಯಲ್ಲಿ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಆತ ಮುಟ್ಟಿ ನೋಡುತ್ತಿದ್ದ. ಧೂಳು ತಿನ್ನುತ್ತಿದ್ದ ಗೋಕಾಕರ ಬೃಹತ್ ಮಹಾ ಕಾವ್ಯ. ಬಿಡಿಸಿದ. ಬೆಲೆ ನೋಡಿ ಬೆಚ್ಚಿದ. ಗೋಕಾಕರ ಆ ಮಹಾಕಾವ್ಯದ ದರದಲ್ಲಿ ದೇವನೂರ ಮಹಾದೇವರ ಸಮಗ್ರ ಕೃತಿಗಳನ್ನು ಕೊಂಡ.