ಸಿಸಿ ಕ್ಯಾಮರಾದಲ್ಲಿ ಮಾತ್ರ ಕಾಣುವ ಭೂತವದು!
ನರೇಂದ್ರ ನಾಯಕ್ ಜೀವನ ಕಥನ
ಭಾಗ 16
ತಂತ್ರಜ್ಞಾನಗಳ ಆವಿಷ್ಕಾರವು ಹೆಚ್ಚುತ್ತಿರುವಂತೆ ಭೂತ- ಪ್ರೇತಗಳ ಅವತಾರವೂ ವಿಭಿನ್ನವಾಗುತ್ತಿದೆ. ಖಿನ್ನ ಮಾನಸಿ ಕತೆಗೆ ಹುಲ್ಲುಕಡ್ಡಿಯೂ ಭೂತವಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷ ಎನ್ನಬಹುದು. ಹೌದು, ಆ ಭೂತ ಸಿಸಿ ಕ್ಯಾಮರಾದಲ್ಲಿ ಮಾತ್ರ ಕಾಣುತ್ತೆ. ಆ ಭೂತವನ್ನು ಕಂಡು ಆ ಮನೆಯವರು ಭಯಭೀತರಾಗಿದ್ದು ಮಾತ್ರವಲ್ಲ, ಅದು ತಮ್ಮ ನೆರೆಮನೆಯವರ ಮಾಟಮಂತ್ರದ ಪರಿಣಾಮವೆಂದೇ ನಂಬಿ ಮಾನಸಿಕವಾಗಿ ಕುಬ್ಜರಾದ ಘಟನೆಯಿದು.
ಕೆಲ ದಿನಗಳ ಹಿಂದೆಯಷ್ಟೆ ನನ್ನ ಮಿತ್ರ ಹಾಗೂ ವಿಚಾರವಾದಿ ಯೂ ಆಗಿರುವ ಹರಿಯಪ್ಪ ಪೇಜಾವರ ಅವರು ನನ್ನನ್ನು ಭೇಟಿಯಾಗಿ ತನ್ನ ಆತ್ಮೀಯರೊಬ್ಬರ ಮನೆಯಲ್ಲಿ ಅತಿಮಾನುಷ ವಿದ್ಯಮಾನ ನಡೆಯುತ್ತಿರುವುದರ ಬಗ್ಗೆ ತಿಳಿಸಿದ್ದರು. ಅಂದ ಹಾಗೆ ಆ ಅತಿಮಾನುಷ ಶಕ್ತಿ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿರುವುದರಿಂದ ನನಗೂ ಆ ಘಟನೆ ವಿಚಿತ್ರವೆನಿಸಿತು ಮಾತ್ರವಲ್ಲ, ತನಿಖೆಗೆ ಮುಂದಾಗಲು ಪ್ರೇರೇಪಿಸಿತು.
ನಾವು ಆ ಮನೆಗೆ ಹೋಗಿದ್ದ ವೇಳೆ ಮನೆಯವರು ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಹಾಗಿದ್ದರೂ ನಾವು ನಮ್ಮ ತನಿಖೆಯನ್ನು ನಡೆಸಲು ತೀರ್ಮಾನಿಸಿದೆವು. ಮಹಾ ಲಯ ಅಮಾವಾಸ್ಯೆಯ ರಾತ್ರಿ ಈ ಘಟನೆ ನಡೆದಿದೆ ಎಂಬುದಾಗಿ ನನಗೆ ತಿಳಿಸಲಾಗಿತ್ತು. ಆ ರಾತ್ರಿಯಂದು ಸಿಸಿ ಕ್ಯಾಮರಾದಲ್ಲಿ ಫುಟೇಜೊಂದು ಸೆರೆಯಾಗಿತ್ತು. ವಿಚಿತ್ರವಾದ ಕಡ್ಡಿಯಾಕಾರದ ಆಕೃತಿಯೊಂದು ಅತ್ತಿಂದಿತ್ತ ಚಲಿಸುವ ದೃಶ್ಯವನ್ನು ಕ್ಯಾಮರಾ ಸೆರೆಹಿಡಿದಿತ್ತು. ಸಿಸಿ ಕ್ಯಾಮರಾದ ಗುಣಮಟ್ಟ ಅಷ್ಟೇನೂ ಚೆನ್ನಾಗಿ ಇಲ್ಲದ ಕಾರಣ ಆ ಭೂತವನ್ನು ಸುಲಭದಲ್ಲಿ ಪತ್ತೆ ಹಚ್ಚು ವುದು ಕೂಡಾ ತ್ರಾಸದಾಯಕವಾಗಿತ್ತು. ಗಂಟಿನಾಕಾರದ ಆಕೃತಿ ಯೊಂದು ಅತ್ತಿಂದಿತ್ತ ಚಲಿಸುತ್ತಾ ಕೊನೆಗೆ ಮರೆಯಾಗಿ ಮತ್ತೆ ಕೆಲ ಗಂಟೆಗಳ ಬಳಿಕ ಮುನುಷ್ಯನ ಕಡ್ಡಿಯಾಕಾರದ ಆಕೃತಿಯೊಂದು ತೇಲುತ್ತಾ ಸಾಗುವಂತೆ ಮೇಲ್ನೋಟಕ್ಕೆ ಭಾಸವಾಗುತ್ತಿತ್ತು.
ಈ ಘಟನೆ ಮನೆಯವರನ್ನು ತೀರಾ ಭಯಭೀತರನ್ನಾಗಿಸಿತ್ತು. ಅಮಾವಾಸ್ಯೆಯ ರಾತ್ರಿಯಂದೇ ಈ ಘಟನೆ ಬೇರೆ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದ್ದು ಮನೆಯವರನ್ನು ಆತಂಕಕ್ಕೆ ತಳ್ಳಿತ್ತು. ತಮ್ಮ ನೆರೆ ಮನೆಯವರ ಜತೆ ವಿವಾದ ಇದ್ದ ಕಾರಣ ಅವರೇನೋ ಮಾಟ ಮಾಡಿಸಿದ್ದಾರೆಂಬುದು ಅವರ ನಿಲುವಾಗಿತ್ತು. ಸುಮಾರು ಐದು ಜಿಬಿಯಷ್ಟಿದ್ದ ವೀಡಿಯೋ ರೆಕಾರ್ಡಿಂಗನ್ನು ನಾವು ನಮ್ಮಿಂದಿಗೆ ತಂದು ಅದನ್ನು ತಜ್ಞರಿಂದಲೇ ತಪಾಸಣೆಗೊಳಪಡಿಸಲು ನಿರ್ಧರಿಸಿದೆವು. ನಮ್ಮ ತಂಡವು ವೀಡಿಯೋಗ್ರಫಿ ಕ್ಷೇತ್ರದಲ್ಲಿ ತಜ್ಞರಾದ ಪ್ರಶಾಂತ್ ನಾಯಕ್ರನ್ನು ಸಂಪರ್ಕಿಸಿ ಈ ಭೂತದ ಸಿಸಿ ಕ್ಯಾಮರಾ ಫುಟೇಜ್ ತಪಾಸಣೆ ನಡೆಸಲು ತಿಳಿಸಿದೆವು. ಅವರು ಸುಮಾರು ತಾಸುಗಳ ಕೂಲಂಕಷ ಪರಿಶೀಲನೆ ನಡೆಸಿದರು. ಅಮಾವಾಸ್ಯೆಯ ಆ ದಿನ ರಾತ್ರಿ ಮೋಡವೂ ಕವಿದಿದ್ದ ಕಾರಣ ಕ್ಯಾಮರಾದಲ್ಲಿ ಸೆರೆಯಾದ ಚಿತ್ರಣವು ರೆಡ್ ಮೋಡ್ಗೆ ತಲುಪಿತ್ತು. ಸಾಮಾನ್ಯವಾಗಿ ಮನುಷ್ಯರ ಕಣ್ಣಿಗೆ ಕಾಣದ ಚಿತ್ರಣವನ್ನು ಕ್ಯಾಮರಾ ಕಣ್ಣು ಸೆರೆಹಿಡಿದಿತ್ತು. ಹಾಗಾಗಿ ಆ ಕ್ಯಾಮರಾದಲ್ಲಿ ಕಂಡ ದೃಶ್ಯಗಳು ಅದಾಗಲೇ ಮನೆಯವರ ಮನದಲ್ಲಿ ಬೇರೂರಿದ್ದ ಅನುಮಾನದಂತೆ ನೆರೆಮನೆಯವರೇ ತಮಗೆ ಹಾನಿ ಮಾಡಲೆಂದು ಪ್ರೇತವನ್ನು ಮಾಟ ಮಾಡಿಸಿ ಕಳುಹಿಸಿ ರಬಹುದೆಂಬ ಶಂಕೆಯನ್ನು ಸೃಷ್ಟಿಸಲು ಕಾರಣವಾಗಿತ್ತು. ಆದರೆ ನಮ್ಮ ತಜ್ಞ ಪ್ರಶಾಂತ್ ನಾಯಕ್ರವರ ತಪಾಸಣೆಯು ವಾಸ್ತವದಲ್ಲಿಕಡ್ಡಿಯಾಕಾರಾದ ಆ ಆಕೃತಿಯು ಜೇಡನ ಬಲೆಯಲ್ಲಿ ಸಿಲುಕಿಹಾ ಕಿಕೊಂಡ ಕೀಟದ್ದು ಎಂಬುದಾಗಿ ದೃಢಪಡಿಸಿತು. ಜೇಡರ ಬಲೆಯಲ್ಲಿ ಸಿಲುಕಿದ್ದ ಕೀಟವು ರಾತ್ರಿಯ ಗಾಳಿಗೆ ಅತ್ತಿಂದಿತ್ತ ಚಲಿಸಿ ದಂತೆ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಪ್ರಶಾಂತ್ ನಾಯಕ್ ಇಷ್ಟಕ್ಕೇ ತೃಪ್ತರಾಗಲಿಲ್ಲ. ಪ್ರತಿಯೊಂದು ಆ್ಯಂಗಲ್ನಲ್ಲಿಯೂ ಆ ಚಿತ್ರಣವನ್ನು ಪರಿಶೀಲನೆಗೊಳಪಡಿಸಬೇಕೆಂದುಕೊಂಡರು. ಮತ್ತೆ ಹಲವು ಗಂಟೆಗಳ ಕಾಲ ಅದನ್ನು ನಿಖರವಾಗಿ ಪರಿಶೀಲಿಸಿದ ಪ್ರಶಾಂತ್, ಅದೊಂದು ಕೀಟವೇ ಎಂಬುದನ್ನು ನಮ್ಮೆದುರು ಸಾಬೀತು ಪಡಿಸಿದ್ದರು. ಈ ವಿಷಯವನ್ನು ನಾವು ಮನೆಯವರಿಗೆ ತಿಳಿಸಬೇಕಾದರೆ ಮಾತ್ರ ನಮಗೆ ಸಾಕಷ್ಟು ಸಮಯ ಹಿಡಿಯಿತು. ಅದಾಗಲೇ ಮನದಲ್ಲಿ ನೆರೆಮನೆಯವರಿಂದ ರವಾನಿಸಲ್ಪಟ್ಟಿದ್ದ ಪ್ರೇತವೆಂದು ಅನುಮಾನವನ್ನು ಗಟ್ಟಿಮಾಡಿಕೊಂಡಿದ್ದ ಮನೆಯ ವರು ಅಷ್ಟು ಸುಲಭದಲ್ಲಿ ನಮ್ಮ ಮಾತನ್ನು ನಂಬದಾಗಿದ್ದರು. ಮತ್ತೆ ಎಳೆ ಎಳೆಯಾಗಿ ಅವರಿಗೆ ವೀಡಿಯೋ ತುಣುಕುಗಳ ಚಿತ್ರಣವನ್ನು ತಜ್ಞ ಪ್ರಶಾಂತ್ ನಾಯಕ್ರವರು ತಪಾಸಣೆಗೊಳಪಡಿಸಿದಾಗ ದೊರೆತ ಸಮಗ್ರ ಮಾಹಿತಿಯನ್ನು ಒದಗಿಸಲಾಯಿತು. ಅಂತೂ ಕೊನೆಗೂ ಅವರು ನಮ್ಮ ಮಾತನ್ನು ನಂಬುವಂತಾಯಿತು.
ಡಿಸ್ಕವರಿಯೆದುರು ಬಯಲಾದ ಉಂಗುರ ಭವಿಷ್ಯ!
ಕೆಲವೊಂದು ರೀತಿಯ ಉಂಗುರಗಳನ್ನು ಕೈ ಬೆರಳುಗಳಿಗೆ ಧರಿಸಿ ಕೊಂಡರೆ ಒಳ್ಳೆಯದಾಗುತ್ತದೆ ಎಂಬ ಭವಿಷ್ಯ ನುಡಿಯುವವರು ನಮ್ಮ ಸುತ್ತ ಮುತ್ತ ಬೀದಿಗಳಲ್ಲಿಕಾಣ ಸಿಗುತ್ತಾರೆ. ಅದೆಷ್ಟು ಜನಜಾಗೃತಿ ಮೂಡಿಸಿದರೂ ಹೊಸ ಹೊಸ ವಿಧಾನಗಳಲ್ಲಿ ಜನರನ್ನು ಮೋಸಗೊಳಿಸಲು ಮುಂದಾಗುವವರ ಮುಂದೆ ಜನರೂ ಮೋಸ ಹೋಗುತ್ತಿರುತ್ತಾರೆ.
ಇದು ಸುಮಾ ರು 10 ವರ್ಷಗಳ ಹಿಂದೆ ನಡೆದ ಘಟ ನೆ. ನಗರದ ಜನನಿಬಿಡ ಪ್ರದೇಶವಾದ ಹಂಪನಕಟ್ಟೆಯ ಬಳಿ ನಿರ್ದಿಷ್ಟ ಪ್ರದೇಶ ವೊಂದರಲ್ಲಿ ವ್ಯಕ್ತಿಯೊಬ್ಬ ಉಂಗುರಗಳ ಮೂಲಕ ಜನರ ಭವಿಷ್ಯ ನಿರ್ಧರಿಸು ತ್ತಿದ್ದ. ಇಂತಹ ಹಲವಾರು ಜನರನ್ನು ನಾವು ನೋಡು ತ್ತಿರುತ್ತೇವೆ. ನಾನು ಒಂದು ದಿನ ಆತನ ಬಳಿಗೆ ಹೋಗಿ ಒಂದು ಉಂಗುರವನ್ನು ಖರೀದಿಸಿದೆ. ಅದಕ್ಕೆ 200 ರೂ. ಆತ ಪಡೆದಿದ್ದ. ಉಂಗುರದಿಂದ ನನ್ನ ಭವಿಷ್ಯ ಬದಲಾವಣೆ ಯಾಗುವುದೆಂಬ ಹೇಳಿಕೆಯನ್ನು ಬೇರೆ ಆತ ನೀಡಿದ್ದ. ನಾನು ಮಾತನಾಡದೆ ಅಲ್ಲಿಂದ ತೆರಳಿದ್ದೆ. ಒಂದು ವಾರದ ಬಳಿಕ ನನ್ನಲ್ಲಿಗೆ ಡಿಸ್ಕವರಿ ಚಾನೆಲ್ನ ತಂಡವೊಂದು ಬರುವುದಿತ್ತು. ನಾನು ಆ ಸಂದರ್ಭವನ್ನು ಈ ನಕಲಿ ಉಂಗುರ ಭವಿಷ್ಯದ ಬಗ್ಗೆ ಜನರ ಕಣ್ತೆರೆಸುವ ಜತೆಗೆ ಜಾಗೃತಿ ಮೂಡಿಸುವುದಕ್ಕಾಗಿ ಉಪಯೋಗಿಸಿ ಕೊಂಡೆ. ಉಂಗುರ ಖರೀದಿಸಿದ ಒಂದು ವಾರ ಕಳೆದು ರವಿವಾರ ದಿನ ಮತ್ತೆ ಆ ಉಂಗುರ ಖರೀದಿಸಿದಾತನ ಬಳಿ ಹೋಗಿ ‘‘ನಿನ್ನ ಉಂಗುರದಿಂದ ನನಗೇನೂ ಒಳ್ಳೆಯದಾ ಗಿಲ್ಲ. ನನ್ನ ಹಣ ವಾಪಸು ಕೊಡು ಎಂದೆ’’. ಆತ ಹಣ ಹಿಂದಿರುಗಿಸಲು ಒಪ್ಪಲಿಲ್ಲ. ನಾನೂ ಆತನಲ್ಲಿ ವಾಗ್ವಾದ ಮಾತನಾಡುತ್ತಿ ದ್ದಾಗ, ನನ್ನ ಪರಿಚಯ ದ ಎಸ್ಸೈ ಒಬ್ಬರು ಆ ದಾರಿಯಲ್ಲಿ ಹೋಗುತ್ತಿದ್ದವರು ನಿಲ್ಲಿಸಿ ಏನು ಸರ್, ಇಲ್ಲಿ ಎಂದು ಪ್ರಶ್ನಿಸಿದರು. ನಾನು ವಿಷಯ ಹೇಳಿದೆ. ಅವರೂ ಯಾಕೆ ಹೀಗೆಲ್ಲಾ ಜನರಿಗೆ ಮೋಸ ಮಾಡುತ್ತೀರಾ? ಎಂದು ಪ್ರಶ್ನಿಸಿದಾಗ ಜನ ಕೆಲ ಜನರೂ ಸೇರಿದ್ದರು. ಅಲ್ಲಿನ ಪರಿಸ್ಥಿತಿಯನ್ನು ಕಂಡ ಆತ ಹಣ ವನ್ನು ಹಿಂದಿರುಗಿಸಿದ. ಇದೇ ಸಮಯ ದಲ್ಲಿ ಅಲ್ಲಿದ್ದ ಕೆಲ ಜನರೂ ಆತನನ್ನು ದೂರಲಾರಂಭಿಸಿದರು. ಇದೇ ಸಂದರ್ಭದಲ್ಲಿ ಡಿಸ್ಕವರಿ ಚಾನೆಲ್ನ ತಂಡ ನನ್ನ ಈ ಕಾರ್ಯವನ್ನು ತಮ್ಮ ಕ್ಯಾಮರಾ ದಲ್ಲಿ ಸೆರೆಹಿಡಿದಿತ್ತು. ಇದೇನು ದೊಡ್ಡ ಕಾರ್ಯಾಚರಣೆಯ ಲ್ಲದಿದ್ದರೂ ಜನರನ್ನು ಜಾಗೃತ ಮಾಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿ ಎಂಬುದು ನನ್ನ ಅನಿಸಿಕೆ. ನಿಜ, ಯಾವುದನ್ನಾ ದರೂ ಮಾರಿ ಬದುಕುವುದು ಹೊಟ್ಟೆಪಾಡು ಎನ್ನಬಹುದು. ಆದರೆ, ಈ ರೀತಿ ಉಂಗುರದಿಂದ ಒಳ್ಳೆಯದಾಗುತ್ತದೆ ಎಂಬ ಮೋಸದ ಮಾರಾಟವನ್ನು ಮಾತ್ರ ನಾನು ವಿರೋಧಿಸುತ್ತೇನೆ.
ಫಲಜ್ಯೋತಿಷ್ಯವೆಂಬ ರಗಳೆ....
ನಮ್ಮ ಜಿಲ್ಲೆಯಲ್ಲಿ ಬೇರೂರಿರುವ ಮೂಢನಂಬಿಕೆಗಳಲ್ಲಿ ಫಲ ಜ್ಯೋತಿಷ್ಯ ಕೂಡಾ ಒಂದು. ಮದುವೆಯಿಂದ ಆರಂಭಿಸಿ ಮಗುಹುಟ್ಟಿ ಸಾಯುವವರೆಗೂ ಈ ಫಲಜ್ಯೋತಿಷ್ಯ ಕೆಲಸ ಮಾಡು ತ್ತಿರುತ್ತದೆ. ಹುಟ್ಟಿದ ಘಳಿಗೆ, ಸತ್ತ ಘಳಿಗೆಯನ್ನು ನಿರ್ಧರಿಸಲೂ ಜ್ಯೋತಿಷಿಗಳ ಬಳಿ ಹೋಗುವವರಿದ್ದಾರೆ.
ಬಾಲಕನಾಗಿದ್ದ ನಾ ಕಂಡ ಫಲ ಜ್ಯೋತಿಷ್ಯ!
ಒಮ್ಮೆ ನನ್ನ ಇಬ್ಬರು ಭಾವಂದಿರು ಓರ್ವ ಜ್ಯೋತಿಷಿಯನ್ನೇ ಪರೀಕ್ಷಿ ಸಲು ತೆರಳಿದ್ದರು. ಜ್ಯೋತಿಷಿಯಿದ್ದ ಕೊಠಡಿ ಪ್ರವೇಶಿಸಿ ದವರಲ್ಲಿ ಒಬ್ಬಾತ ‘‘ನಮ್ಮಿಬ್ಬರಲ್ಲಿ ಡಾಕ್ಟರ್ ಯಾರು? ಇಂಜಿನಿಯರ್ ಯಾರುಹೇಳಿ’’ ಎಂದು ಪ್ರಶ್ನಿಸಿದರು. ಕೂಡಲೇ ಜ್ಯೋತಿಷಿ ಪ್ರಶ್ನೆ ಕೇಳಿದವನ ನ್ನು ಡಾಕ್ಟರ್ ಎಂದೂ ಇನ್ನೊಬ್ಬಾತ ಇಂಜಿನಿಯರ್ ಎಂದೂ ಉತ್ತ ರಿಸಿದ್ದ. ಮೊದಲನೆಯಾತ ಡಾಕ್ಟರೇ ಆಗಿದ್ದ. ಆದರೆ ಎರಡನೆಯವ ಚಾರ್ಟೆಡ್ ಅಕೌಂಟೆಂಟ್ ಆಗಿದ್ದ. ಇದನ್ನು ಜ್ಯೋತಿಷಿಗೆ ತಿಳಿಸಿದಾ ಗ, ‘‘ಇಂಜಿನಿಯರ್ ಮತ್ತು ಚಾರ್ಟೆಡ್ ಅಕೌಂಟೆಂಟ್ ಇಬ್ಬರೂ ಮಾಡುವುದು ಲೆಕ್ಕವಲ್ಲವೇ?’’ ಎಂದು ಆತ ಮರುಪ್ರಶ್ನೆ ಪ್ರಶ್ನಿಸುತ್ತಾ,ಅದಕ್ಕೆ ನಾನು ಇನ್ನೊಬ್ಬರು ಇಂಜಿನಿಯರ್ ಎಂದು ಹೇಳಿದ್ದ ಎಂದಿದ್ದ. ನಿಜ, ಜ್ಯೋತಿಷ್ಯ ಹೇಳುವವರಿಗೆ ಅಕೌಂಟೆಂಟ್ ಮತ್ತು ಇಂಜಿನಿ ಯರ್ಗಿರುವ ವ್ಯತ್ಯಾಸ ತಿಳಿಯದೆ ಹೋಯಿತಲ್ಲಾ ಎಂಬುದು ಬಾಲಕನಾಗಿದ್ದಾಗ ನನ್ನ ಮನಸ್ಸಿನಲ್ಲಿ ಉದ್ಭವಿಸಿದ ಪ್ರಶ್ನೆಯಾಗಿತ್ತು.
ಫಲ ಜ್ಯೋತಿಷಿಗಳ ತಪಾಸಣೆ....
ನನ್ನ ಸ್ನೇಹಿತರೊಬ್ಬರು ನನ್ನ ಬಳಿ ಬಂದು, ತಮ್ಮ ಸಂಬಂಧಿಕರೊಬ್ಬರು ಜೀವನದ ಹಿಂದಿನ ಘಟನೆಗಳೆಲ್ಲವನ್ನೂ ನಿಖರವಾಗಿ ಹೇಳು ತ್ತಾರೆ. ಬೇಕಾದರೆ ನೀನೂ ಪರೀಕ್ಷಿಸು ಎಂದು ಹೇಳಿದ. ಹದಿ ಹರೆ ಯದವನಾಗಿದ್ದ ನನಗೂ ಕುತೂಹಲ ಮೂಡಿತು. ನಾನು ನನ್ನ ಸ್ನೇಹಿತರ ಸಂಬಂಧಿಕರ ಮನೆಗೆ ಹೋಗಿ ನನ್ನ ಕೈ ತೋರಿಸಿದೆ. ಅವರು ನನ್ನ ಕೈ ನೋಡಿ ಹಿಂದಿದ್ದನ್ನೆಲ್ಲಾ ಹೇಳಿದರು. ಅವೆಲ್ಲವೂ ಸರಿಯಾಗಿತ್ತು. ನನಗೆ ಪರಮಾಶ್ಚರ್ಯ. ಆದರೆ ವಿಷಯವೇ ನೆಂದರೆ ಆ ಜ್ಯೋತಿಷಿ ನನ್ನ ತಂದೆಯ ಮಿತ್ರ ಎಂಬುದು ನನಗೆ ಆ ಬಳಿಕ ತಿಳಿಯಿತು. ಈ ಕಾರಣದಿಂದಾಗಿ ನಮ್ಮ ಕುಟುಂಬದ ಎಲ್ಲಾ ವಿಷಯಗಳು ಅವರಿಗರಿವಿತ್ತು.
ಮತ್ತೊಂದು ಜ್ಯೋತಿಷಿ ನಾನು ವಿವಾಹವಾಗುವುದು ಉತ್ತರ ಭಾರತ ಕಡೆಯ ಬೇರೆ ಜಾತಿಯ ಹೆಣ್ಣನ್ನು ಎಂದು ಭವಿಷ್ಯ ನುಡಿದಿ ದ್ದರು. ಮಾತ್ರವಲ್ಲದೆ ಆಕೆಯ ಕುಟಂಬದವರು ಸ್ಥಿತಿವಂತರಾಗಿರು ತ್ತಾರೆ. ನನಗೆ ಸಹಾಯವನ್ನೂ ಮಾಡುತ್ತಾರೆ ಎಂದೂ ಅವರು ಹೇಳಿ ದ್ದರು. ವಾಸ್ತವದಲ್ಲಿ ನಾನು ವಿವಾಹವಾಗಿದ್ದು, ಮಂಗಳೂರಿನ ಹೆಣ್ಣನ್ನು!