ಮಾಡದ ಅಪರಾಧಕ್ಕೆ ನರಕಯಾತನೆಯ ಶಿಕ್ಷೆ
ಭಾಗ-1
‘‘ನಾನು ಮಾಡಿದ ಅಪರಾಧ ಏನೆಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ’’ ಎಂದು ಎಪ್ರಿಲ್ನಲ್ಲಿ ಫೇಸ್ಬುಕ್ ಪೋಸ್ಟ್ ಗಳಿಗಾಗಿ ಜೈಲುಶಿಕ್ಷೆಗೊಳಗಾದ ಉತ್ತರ ಪ್ರದೇಶದ ಹದಿಹರೆಯದ ಹುಡುಗ ಉತ್ತರಗಳಿಗಾಗಿ ತಡಕಾಡುತ್ತಿದ್ದಾನೆ.
ಸಮೀಪದ ಮದ್ರಸವೊಂದರಲ್ಲಿ ಎಪ್ರಿಲ್ 2ರಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ 18ರ ಹರೆಯದ ಝಾಕಿರ್ ಅಲಿ ತ್ಯಾಗಿ ಮನೆಗೆ ಮರಳಿದಾಗ ರಾತ್ರಿ ಸುಮಾರು 8:45 ಉತ್ತರಪ್ರದೇಶದ ಮುಝಫ್ಫರ್ ಪಟ್ಟಣದಲ್ಲಿ ಆತ ತನ್ನ ಸಂಬಂಧಿಕ ವಾರಿಸ್ಖಾನ್ ಜೊತೆ ವಾಸಿಸುತ್ತಿದ್ದ. ತ್ಯಾಗಿ ಮನೆಯನ್ನು ಪ್ರವೇಶಿಸುತ್ತಿದ್ದಂತೆಯೇ ಆತ ಇಬ್ಬರು ಅನಿರೀಕ್ಷಿತ ಅತಿಥಿಗಳನ್ನು ನೋಡಿದ: ಇಬ್ಬರು ಪೊಲೀಸ್ ಅಧಿಕಾರಿಗಳು.
ತನ್ನ 90 ಕಿ.ಮೀ. ದೂರದ ಹಳ್ಳಿಯಿಂದ ತ್ಯಾಗಿ ಕಳೆದ ವರ್ಷ ವಾರಿಸ್ಖಾನ್ನ ಸಾರಿಗೆ ಕಂಪೆನಿಯಲ್ಲಿ ಓರ್ವ ಲೆಕ್ಕ ಪರಿಶೋಧಕನಾಗಿ ಕೆಲಸ ಮಾಡಲು ಬಂದಿದ್ದ. ಖಾನ್ನ ಸಣ್ಣ ಸಂಸ್ಥೆಯ ಮುಖ್ಯ ಗಿರಾಕಿ ಒಂದು ಕಬ್ಬಿಣ ಹಾಗೂ ಉಕ್ಕು ಫ್ಯಾಕ್ಟರಿ. ಆದರೆ ಇದು ಇತ್ತೀಚೆಗೆ ಬಾಗಿಲು ಮುಚ್ಚಿತ್ತು. ಆ ಹದಿಹರೆಯದ ಹುಡುಗ ಈಗ ಮಿರತ್ನಲ್ಲಿ ಒಂದು ಬ್ಯಾಚುಲರ್ ಆಫ್ ಆರ್ಟ್ಸ್(ಬಿ.ಎ) ದೂರ ಶಿಕ್ಷಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯಾಗಿ ನೋಂದಾಯಿಸಿಕೊಂಡಿದ್ದಾನೆ.
‘‘ಆವತ್ತು ಮನೆಗೆ ಬಂದಿದ್ದ ಅತಿಥಿಗಳಿಗೆ ಕುಡಿಯಲು ಎರಡು ಗ್ಲಾಸ್ ನೀರು ತರುವಂತೆ ನನಗೆ ಹೇಳಿದಾಗ, ಅವರು ನನ್ನ ಸಂಬಂಧಿ (ಖಾನ್) ಜೊತೆ ಆಗಾಗೆ್ಗೆೆ ಗಹಗಹಿಸಿ ನಗುತ್ತ, ಹರಟೆ ಹೊಡೆಯುತ್ತಿರುವುದನ್ನು ಗಮನಿಸಿದೆ. ಇಬ್ಬರು ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬ ನಾನು ಇನ್ನೇನು ಪಕ್ಕದ ಕೋಣೆಗೆ ಹೋಗಬೇಕು ಎನ್ನುವಷ್ಟರಲ್ಲಿ, ನನ್ನ ಮೊಣಗಂಟಿನಲ್ಲಿ ನನ್ನನ್ನು ಹಿಡಿದು ಅವರ ಜೊತೆ ಬರುವಂತೆ ಹೇಳುವವರೆಗೆ, ಅವರ ಭೇಟಿ ನನ್ನ ಸಂಬಂಧಿಕನ ವ್ಯವಹಾರ ಕುರಿತಾದ ಯಾವುದೋ ಒಂದು ಶಿಷ್ಟಾಚಾರಕ್ಕೆ ಸಂಬಂಧಿಸಿರಬೇಕು ಎಂದು ನಾನು ತಿಳಿದಿದ್ದೆ’’ ಎಂದಿದ್ದಾನೆ ತ್ಯಾಗಿ.
ತ್ಯಾಗಿಯ ಸಂಬಂಧಿಕರು ಆತನೇಕೆ ಪೊಲೀಸ್ ಠಾಣೆಗೆ ಬರಬೇಕು ಎಂದು ಕೇಳಿದಾಗ, ರಾಜ್ಯದ ಮುಖ್ಯಮಂತ್ರಿ ಆದಿತ್ಯನಾಥ್ರ ಬಗ್ಗೆ ಅವನು ಫೇಸ್ಬುಕ್ನಲ್ಲಿ ಹಾಕಿದ್ದ ಒಂದು ಪೋಸ್ಟ್ ಬಗ್ಗೆ ಅವನನ್ನು ಪ್ರಶ್ನಿಸಲು ಕೊಪ್ವಾಲಿ ನಗರ್ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವುದಾಗಿ ಅವರು ಹೇಳಿದರು.
ಆದಿತ್ಯನಾಥ್ ಎರಡು ವಾರಗಳ ಮೊದಲು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ತ್ಯಾಗಿ ಮತ್ತು ಅವನ ಸಂಬಂಧಿಕರಿಗೆ ಅವನನ್ನು ಒಂದು ಗಂಟೆಗಿಂತ ಹೆಚ್ಚು ಹೊತ್ತು ಠಾಣೆಯಲ್ಲಿ ಇಟ್ಟುಕೊಳ್ಳುವುದಿಲ್ಲವೆಂದು ಅವರು ಹೇಳಿದರು.
ಆದರೆ ಪೊಲೀಸರ ವಿಚಾರಣೆ ತ್ಯಾಗಿಗೆ ಜೈಲಿನಲ್ಲಿ 42 ದಿನಗಳ ನರಕವಾಗಿ ಪರಿವರ್ತಿತವಾಯಿತು. ಯಾಕೆಂದರೆ ಅವನನ್ನು ಒಂದು ಕಂಪ್ಯೂಟರ್ ಮೂಲಕ ಆಕ್ಷೇಪಾರ್ಹ ವಿಷಯವನ್ನು ಇತರರ ಜತೆ ಹಂಚಿಕೊಂಡ ಮತ್ತು ಮೋಸ ಮಾಡಿದ ಅಪಾದನೆಯ ಮೇಲೆ ಬಂಧಿಸಲಾಗಿತ್ತು. ಅವನು ಪೊಲೀಸ್ ಠಾಣೆ ತಲುಪಿದ ಸ್ವಲ್ಪವೇ ಹೊತ್ತಿನೊಳಗಾಗಿ ಅವನ ನರಕಯಾತನೆ ಆರಂಭಗೊಂಡಿತ್ತು. ‘‘ರಾತ್ರಿ ಸುಮಾರು 11 ಗಂಟೆ ವೇಳೆಗೆ ನಾಗರಿಕ ಉಡುಪಿನಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸ್ಠಾಣೆಗೆ ಬಂದು ನನ್ನನ್ನು ಚೆನ್ನಾಗಿ ಥಳಿಸಿದ್ದ. ಆತ ಯಾರೆಂದು ಇಷ್ಟರವರೆಗೂ ನನಗೆ ಗೊತ್ತಿಲ್ಲ’’ ಎಂದಿದ್ದಾನೆ ತ್ಯಾಗಿ.
ಸರಕಾರದ ಆಳುವ ಬಿಜೆಪಿ ಮತ್ತು ಹಿಂದುತ್ವ ಗುಂಪುಗಳ ಬಗ್ಗೆ ಟೀಕೆ ಮಾಡಿದವರ ಮೇಲೆ ಫೇಸ್ಬುಕ್ ದಾಳಿ ನಡೆಸುತ್ತಿರುವುದಾಗಿ ಅಪಾದನೆಗಳು ಕೇಳಿ ಬರುತ್ತಿರುವ ಸಂದರ್ಭದಲ್ಲಿ ತ್ಯಾಗಿಯ ನರಕಯಾತನೆಯ ಕತೆ ಮಹತ್ವ ಪಡೆಯುತ್ತದೆ. ಸಾಮಾಜಿಕ ನೆಟ್ವರ್ಕಿಂಗ್ ಸೈಟ್ ಆಗಿರುವ ಫೇಸ್ಬುಕ್, ಸರಕಾರದ ಒತ್ತಡಕೊಳ್ಳಗಾಗಿ ಹಲವಾರು ಫೇಸ್ಬುಕ್ ಖಾತೆಗಳನ್ನು ಬ್ಲಾಕ್ ಮಾಡಿರುವ, ತಡೆಹಿಡಿದಿರುವ ಆಪಾದನೆಗೆ ಗುರಿಯಾಗಿದೆ.
ತಪ್ಪು ಟೀಕೆಗಳು
ತ್ಯಾಗಿ ಪ್ರಕರಣದಲ್ಲಿ ಪೊಲೀಸರ ಮೊದಲ ಮಾಹಿತಿ ವರದಿಯಲ್ಲಿ ಪೊಲೀಸ್ ದೂರಿನಲ್ಲಿ ಪಟ್ಟಿ ಮಾಡಲಾಗಿರುವ ಮೊದಲ ಅಪರಾಧವೆಂದರೆ ತ್ಯಾಗಿಯ ಫೇಸ್ಬುಕ್ ಫ್ರೊಫೈಲ್ ಚಿತ್ರವು ಕಳೆದ ವರ್ಷ ದಾದ್ರಿ ಜಿಲ್ಲೆಯಲ್ಲಿ ಕೊಲೆ ಅಪಾದಿತನೊಬ್ಬನನ್ನು ಅಟ್ಟಿಸಿಕೊಂಡು ಹೋಗುವಾಗ ಕೊಲ್ಲಲ್ಪಟ್ಟ ಒಬ್ಬ ಪೊಲೀಸ್ ಅಧಿಕಾರಿಯ ಫೋಟೊ ಎನ್ನುವುದು. ಪೊಲೀಸರಿಗೆ ನೀಡಲಾದ ದೂರಿನಲ್ಲಿ ಹಲವಾರು ವಿಷಯಗಳ ಬಗ್ಗೆ ತ್ಯಾಗಿ ಮಾಡಿದ್ದ ಎನ್ನಲಾದ ಟೀಕೆಗಳ ಉಲ್ಲೇಖವಿದೆ. ಅಂತಹ ಒಂದು ಟೀಕೆ ಉತ್ತರಾಖಂಡ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಗಂಗಾನದಿಗೆ ಒಂದು ಜೀವಂತ ಅಸ್ತಿತ್ವ ನೀಡುವ ಕುರಿತಾಗಿದ್ದು, ಯಾರಾದರೂ ನದಿಯಲ್ಲಿ ಮುಳುಗಿ ಸತ್ತರೆ ನದಿಯ ವಿರುದ್ಧ ಕ್ರಿಮಿನಲ್ ದಾವೆ ಹೂಡಲಾಗುತ್ತದೆಯೇ ಎಂದು ಅದು ಪ್ರಶ್ನಿಸುತ್ತದೆ. ಹೈಕೋರ್ಟ್ನ ಆಜ್ಞೆಯ ವಿರುದ್ಧ ಆ ರಾಜ್ಯದ ಬಿಜೆಪಿ ಸರಕಾರ ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿ ಆ ಆಜ್ಞೆಗೆ ಒಂದು ತಾತ್ಕಾಲಿಕ ತಡೆ ಪಡೆಯುವಲ್ಲಿ ಯಶಸ್ವಿಯಾಗಿತ್ತು.
ತ್ಯಾಗಿಯ ಫೇಸ್ಬುಕ್ ಪೋಸ್ಟ್ಗಳಲ್ಲಿ ಇನ್ನೊಂದು ಪೋಸ್ಟ್ನ್ನು ಪ್ರಸ್ತಾಪಿಸಿ ಪ್ರಥಮ ಮಾಹಿತಿ ವರದಿ ಹೀಗೆ ಹೇಳುತ್ತದೆ. ರಾಮಮಂದಿರ ಬಗ್ಗೆ ಸರಕಾರ ನೀಡಿರುವ ಆಶ್ವಾಸನೆ ಒಂದು ಗಿಮಿಕ್ ಅಲ್ಲದೆ ಬೇರೇನೂ ಅಲ್ಲ. ಮುಂದಿನ ಚುನಾವಣೆಯಲ್ಲಿ ಮತದಾರರನ್ನು ಆಕರ್ಷಿಸಲು ಪುನಃ ಒಮ್ಮೆ ಈ ಆಶ್ವಾಸನೆಯನ್ನು ನೀಡಲಾಗುತ್ತದೆ. ‘‘ಮುಲ್ಲಾಗಳನ್ನು ಪಾಕಿಸ್ತಾನಕ್ಕೆ ಕಳುಹಿಸುವುದಾಗಿ ಮಾಡಿರುವ ಆಶ್ವಾಸನೆಯ ಹಾಗೆ’’ ಎನ್ನುವ ತ್ಯಾಗಿಯ ಪೋಸ್ಟ್ನ ಉಲ್ಲೇಖವೂ ಇದೆ.
ದೂರಿನಲ್ಲಿ ಉಲ್ಲೇಖಿಸಲಾದ ಮೂರನೆಯ ಪೋಸ್ಟ್ ನಲ್ಲಿ ತ್ಯಾಗಿ, ಕೇಂದ್ರ ಸರಕಾರ ಈಗ ನೀಡುತ್ತಿರುವ ಏರ್ ಇಂಡಿಯಾ ಹಜ್ ಸಬ್ಸಿಡಿ (ಸಹಾಯಧನ)ವನ್ನು ನಿಲ್ಲಿಸುತ್ತದೆಯೇ ಎಂದು ಕೇಳಿದ್ದಾನೆಂದೂ ಆಪಾದಿಸಲಾ ಗಿದೆ. ಈ ಸಹಾಯಧನ ಯೋಜನೆಯ ಪ್ರಕಾರ ಹಜ್ಯಾತ್ರೆ ಕೈಗೊಳ್ಳುವ ಮುಸ್ಲಿಮರಿಗೆ ಏರ್ಇಂಡಿಯಾ ವಿಮಾನ ಪ್ರಯಾಣದಲ್ಲಿ ಕಡಿತಗೊಳಿಸಲಾದ ವಿಮಾನ ಟಿಕೆಟ್ ದರದಲ್ಲಿ ಟಿಕೆಟ್ ನೀಡಲಾಗುತ್ತದೆ.
ಅವನನ್ನು ಒಂದು ಕಂಪ್ಯೂಟರ್ ಮೂಲಕ ಆಕ್ಷೇಪಾರ್ಹ ವಿಷಯವನ್ನು ಇತರರ ಜತೆ ಹಂಚಿಕೊಂಡ ಮತ್ತು ಮೋಸ ಮಾಡಿದ ಅಪಾದನೆಯ ಮೇಲೆ ಬಂಧಿಸಲಾಗಿತ್ತು. ಅವನು ಪೊಲೀಸ್ ಠಾಣೆ ತಲುಪಿದ ಸ್ವಲ್ಪವೇ ಹೊತ್ತಿನೊಳಗಾಗಿ ಅವನ ನರಕಯಾತನೆ ಆರಂಭಗೊಂಡಿತ್ತು. ‘‘ರಾತ್ರಿ ಸುಮಾರು 11 ಗಂಟೆ ವೇಳೆಗೆ ನಾಗರಿಕ ಉಡುಪಿನಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸ್ಠಾಣೆಗೆ ಬಂದು ನನ್ನನ್ನು ಚೆನ್ನಾಗಿ ಥಳಿಸಿದ್ದ. ಆತ ಯಾರೆಂದು ಇಷ್ಟರವರೆಗೂ ನನಗೆ ಗೊತ್ತಿಲ್ಲ’’ ಎಂದಿದ್ದಾನೆ ತ್ಯಾಗಿ.
ಕೃಪೆ: scroll.in