ಜಾನುವಾರು ಕಳವು ಪ್ರಕರಣ: ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ
ಮಂಗಳೂರು, ಅ. 25: ಜಪ್ಪಿನಮೊಗೆರು ಸಮೀಪದ ಚಿಂತನ ಎಂಬಲ್ಲಿನ ನವದುರ್ಗ ಮಂತ್ರಮೂರ್ತಿ ಪುಣ್ಯ ಕ್ಷೇತ್ರದ ಬಳಿಯ ಸುಮಾರು 5 ಜಾನುವಾರುಗಳನ್ನು ಮಂಗಳವಾರ ಮುಂಜಾನೆ 3 ಗಂಟೆಯ ಸಮಾರಿಗೆ ವಾಹನದಲ್ಲಿ ಕಳವುಗೈದ ಕೃತ್ಯವನ್ನು ಖಂಡಿಸಿ ಬಜರಂಗದಳ ನೇತೃತ್ವದಲ್ಲಿ ಇಂದು ಮಧ್ಯಾಹ್ನ 12:15ಕ್ಕೆ ರಾಷ್ಟ್ರೀಯ ಹೆದ್ದಾರೆ 17ರ ಜಪ್ಪಿನಮೊಗೆರು ಬಳಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು.
ದುಷ್ಕರ್ಮಿಗಳು ತಲವಾರು ಝಲಪಿಸಿ ತಡೆಯಲು ಬಂದ ಸ್ಥಳೀಯರನ್ನು ಬೆದರಿಸಿದ್ದರು ಎಂದು ತಿಳಿದುಬಂದಿದೆ. ದುಷ್ಕರ್ಮಿಗಳನ್ನು ಬಂಧಿಸುವಂತೆ ಪ್ರತಿಭಟನಕಾರರು ಒತ್ತಾಯಿಸಿದರು.
ಈ ಸಂದರ್ಭ ಬಜರಂಗದಳದ ಮುಖಂಡರಾದ ಜಗದೀಶ್ ಶೆರವ, ಗೋಪಾಲ್ ಕುತ್ತಾರು, ಪ್ರದೀಪ್ ಪಂಪ್ ವೆಲ್, ಉಮೇಶ್ ಹಾಗು ಮತ್ತಿತರರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರತಿಭಟನಕಾರರು ಐದು ನಿಮಿಷ ರಸ್ತೆ ನಡೆಸಿದರು. ಈ ಸಂದರ್ಭ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ದುಷ್ಕರ್ಮಿಗಳನ್ನು ಬಂಧಿಸುವ ಭರವಸೆ ನೀಡಿ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು ಎಂದು ತಿಳಿದುಬಂದಿದೆ.