ವಿಶ್ವನಾಥ ಶೆಟ್ಟಿಗಾರ
ಮಂಗಳೂರು, ಅ.31: ಉಳ್ಳಾಲ ಬಂಡಿಕೊಟ್ಯದ ನಿವಾಸಿ ವಿಶ್ವನಾಥ ಶೆಟ್ಟಿಗಾರ (60) ಸೋಮವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಪಣಂಬೂರಿನ ಕೆ.ಐ.ಒ.ಸಿ.ಎಲ್.ನ ನಿವೃತ್ತ ಉದ್ಯೋಗಿಯಾಗಿದ್ದ ಅವರು ಹಿರಿಯ ಕಬ್ಬಡ್ಡಿ ಆಟಗಾರರಾಗಿದ್ದರು. 1975-76ರಲ್ಲಿ ಮಂಗಳೂರು ವಲಯದಿಂದ ಯುನಿವರ್ಸಿಟಿ ಕಬಡ್ಡಿ ತಂಡದ ಸದಸ್ಯರಾಗಿಯೂ ಆಡಿದ್ದರು.
ಉಳ್ಳಾಲದ ಶ್ರೀ ವಿದ್ಯಾರಣ್ಯ ಕಲಾವೃಂದ ಕಬ್ಬಡಿ ತಂಡದ ಸದಸ್ಯರೂ ಆಗಿದ್ದ ಅವರು ರಾಜ್ಯಮಟ್ಟದ ಸ್ಪರ್ಧೆಗಳಲ್ಲೂ ಪಾಲ್ಗೊಂಡಿದ್ದರು. ಸ್ಥಳೀಯ ವಿದ್ಯಾಂಜನೇಯ ವ್ಯಾಯಾಮ ಶಾಲೆಯ ಮಾಜಿ ಅಧ್ಯಕ್ಷ ಹಾಗೂ ಬಂಡಿಕೊಟ್ಟ ಶ್ರೀರಾಧಾಕೃಷ್ಣ ಪ್ರೇಮೋದಯ ಭಜನಾ ಮಂಡಳಿಯ ಸದಸ್ಯರಾಗಿದ್ದರು.
Next Story