ಎರಡು ದಿನ
ಆಸ್ಪತ್ರೆಯಲ್ಲಿ ಎರಡು ದಿನ ಕಳೆದ ಬಳಿಕ ರೋಗಿ ಮೃತಪಟ್ಟ.
ಅದಾಗಲೇ ಆಸ್ಪತ್ರೆಯ ಶುಲ್ಕ ಎರಡು ಲಕ್ಷ ರೂಪಾಯಿ ದಾಟಿತ್ತು.
‘‘ವೈದ್ಯರೇ, ಅವರನ್ನು ಸಾಯಿಸಿದ್ದಕ್ಕಾಗಿ ನಾವು ಎರಡು ಲಕ್ಷ ರೂಪಾಯಿ ಕೊಡಬೇಕೇ?’’ ಮೃತನ ಸಂಬಂಧಿಕರು ಆಕ್ರೋಶದಿಂದ ಕೇಳಿದರು.
‘‘ಸಾಯಿಸಿದ್ದಕ್ಕಾಗಿ ಅಲ್ಲಮ್ಮ, ಇನ್ನೇನು ಸಾಯಲಿದ್ದ ಅವನನ್ನು ಎರಡು ದಿನ ನಾವು ಸಾಯದಂತೆ ನೋಡಿಕೊಂಡದ್ದಕ್ಕಾಗಿ’’ ವೈದ್ಯರು ತಣ್ಣಗೆ ಹೇಳಿದರು ‘‘ಆ ಎರಡು ದಿನ ನೀವು ಅವನಿದ್ದಾನೆ ಎಂಬ ನಂಬಿಕೆಯಿಂದ ಬದುಕಿದ್ದೀರಲ್ಲ, ಆ ಎರಡು ದಿನಗಳಿಗಾಗಿ...’’
Next Story