ವಿದ್ಯುತ್ ಕಡಿತಕ್ಕೆ ಈಗಲೇ ಮುನ್ನುಡಿ?
ಮಾನ್ಯರೆ,
ಈ ವರ್ಷ ಭರ್ಜರಿ ಮಳೆ ಸುರಿದು ಜಲಾಶಯಗಳು ತುಂಬಿವೆ. ವಿವಿಧ ರೂಪಗಳಲ್ಲಿ ನೀರು ಕೂಡಾ ಸಂಗ್ರಹವಾಗಿದೆ. ಆದರೂ ಬೆಂಗಳೂರು ಸೇರಿ ರಾಜ್ಯದ ವಿವಿಧೆಡೆ ಕಳೆದ ಕೆಲವು ದಿನಗಳಿಂದ ಯಾವುದೇ ಪೂರ್ವ ಸೂಚನೆ ನೀಡದೆ ಪದೇ ಪದೇ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಈಗಲೇ ವಿದ್ಯುತ್ ಅಭಾವ ಉಂಟಾದರೆ ಇನ್ನು ಚಳಿಗಾಲ ಕಳೆದು ಬೇಸಿಗೆ ಬರುವಷ್ಟರಲ್ಲಿ ರಾಜ್ಯದ ಜನರು ಅದೇನು ಅನುಭವಿಸಬೇಕೋ ಎಂದು ಭಯ ಪಡುವಂತಾಗಿದೆ. ಈಗಿನ ವಿದ್ಯುತ್ ಕಡಿತಕ್ಕೆ ಸಮಜಾಯಿಷಿ ನೀಡುವ ಬದಲು ಈಗಲೇ ಈ ಸಮಸ್ಯೆಗಳ ಬಗ್ಗೆ ವಿದ್ಯುತ್ ಇಲಾಖೆ ಮುಂಜಾಗರೂಕತೆ ವಹಿಸಿ, ಸರಿಯಾದ ಕ್ರಮ ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ರಾಜ್ಯ ಕತ್ತಲೆಯಲ್ಲಿ ಇರುವುದನ್ನು ತಪ್ಪಿಸಬಹುದಾಗಿದೆ.
Next Story