ಸಮಾನರು
‘‘ಹೆಣ್ಣು ಗಂಡು ಸಮಾನರೇ?’’ ಶಿಷ್ಯ ಕೇಳಿದ
‘‘ಸಾಧ್ಯವೇ ಇಲ್ಲ. ಹೆಣ್ಣು ಗಂಡು ಸಮಾನರು ಎನ್ನುವ ಸಾಲನ್ನು ಹುಟ್ಟು ಹಾಕಿರುವುದೇ ಗಂಡು. ಆತನ ಕೀಳರಿಮೆ ಈ ಹೇಳಿಕೆಯನ್ನು ಹುಟ್ಟು ಹಾಕಿದೆ’’ ಸಂತ ಉತ್ತರಿಸಿದ. ‘‘ಅದು ಹೇಗೆ ಗುರುಗಳೇ?’’
‘‘ಹೆಣ್ಣು ಹೆಚ್ಚು ನೋವು ತಾಳಬಲ್ಲಳು. ಹೆಚ್ಚು ಸಹನೆಯನ್ನು ಹೊಂದಬಲ್ಲಳು. ಗಂಡು ಮಾಡುವ ಬಹುತೇಕ ಕೆಲಸ ಹೆಣ್ಣು ಮಾಡಬಲ್ಲಳು. ಆದರೆ ಹೆಣ್ಣು ಮಾಡುವ ಕೆಲಸ ಗಂಡು ಮಾಡಲಾರ. ಹೆಣ್ಣು ಗಂಡು ಸಮಾನರಲ್ಲ. ಆಕೆ ಗಂಡಿಗಿಂತ ಹೆಚ್ಚು ಶಕ್ತಿವಂತಳು’’
Next Story