ಮುಷ್ಕರ
ಕಳ್ಳರೆಲ್ಲ ಸೇರಿ ಸಭೆ ನಡೆಸಿದರು ‘‘ದಿನದಿಂದ ದಿನಕ್ಕೆ ಕಳವು ನಡೆಸುವವರ ವಿರುದ್ಧ ಹೊಸ ಹೊಸ ಕಾನೂನನ್ನು ಜಾರಿಗೊಳಿಸುತ್ತಿದ್ದಾರೆ. ನಾವು ಮುಷ್ಕರ ಹೂಡೋಣ’’ಸರಿ, ಕಳ್ಳರೆಲ್ಲ ಕೆಲವು ದಿನ ಕಳವು ನಡೆಸದೆ ಮುಷ್ಕರ ಹೂಡಲು ತೀರ್ಮಾನಿಸಿದರು.
ಪೊಲೀಸರಿಗೆ ಬರುವ ಮಾಮೂಲು ನಿಂತು ಹೋಯಿತು. ಕ್ರಿಮಿನಲ್‌ಗಳನ್ನು ಸಾಕುವ ರಾಜಕಾರಣಿಗಳಿಗೆ ಸಮಸ್ಯೆಯಾಯಿತು. ಬೀಗಗಳ ಉದ್ಯಮ ಕುಸಿಯಿತು. ಬಾಗಿಲು ಮಾಡುವ ಬಡಿಗರು ಕೆಲಸವಿಲ್ಲದೆ ಬಿದ್ದರು. ಬ್ಯಾಂಕುಗಳು ಬಡವಾಯಿತು. ಪೊಲೀಸರು ನಿರುದ್ಯೋಗಿಗಳಾದರು. ಶಸ್ತ್ರ ಪೂರೈಕೆ ಉದ್ಯಮ ನಿಂತು ಹೋಯಿತು. ಅರ್ಥವ್ಯವಸ್ಥೆ ಅಸ್ತವ್ಯಸ್ತವಾಗಿಹಾಹಾಕಾರ ಎದ್ದಿತು. ಸರಕಾರ ಎಚ್ಚೆತ್ತಿತ್ತು. ಕಳ್ಳರನ್ನು ಕರೆಸಿ ಅವರ ಬೇಡಿಕೆಗಳಿಗೆ ತಲೆ ದೂಗಿ ಕಾನೂನನ್ನು ದುರ್ಬಲ ಗೊಳಿಸಿತು. ವ್ಯವಸ್ಥೆ ಎಂದಿನಂತೆ ಸಹಜವಾಗಿ ಮುಂದಕ್ಕೆ ಚಲಿಸಿತು.
Next Story