ಯುದ್ಧ
‘‘ಯುದ್ಧವಾಗಲಿ, ಶತ್ರು ದೇಶದ ಜೊತೆಗೆ ಯುದ್ಧವಾಗಲಿ’’
ಜನರು ಕೂಗಿದರು. ಯುದ್ಧ ಘೋಷಣೆಯಾಯಿತು. ಸೈನಿಕರಷ್ಟೇ ಅಲ್ಲ, ಬೃಹತ್ ಕ್ಷಿಪಣಿಗಳು ಊರಿನ ಮಧ್ಯೆಯೇ ಬಿದ್ದು ಜನರು ಸಾಯತೊಡಗಿದರು.
ಅರೆ! ಯುದ್ಧ ಉಭಯ ದೇಶಗಳ ಸೈನಿಕರ ನಡುವೆ ಮಾತ್ರ ನಡೆಯುತ್ತದೆ ಎಂದು ಭಾವಿಸಿದ ಜನರು ಈಗ ‘‘ಯುದ್ಧ ನಿಲ್ಲಲಿ, ಯುದ್ಧ ನಿಲ್ಲಲಿ’’ ಎಂದು ಚೀರಾಡ ತೊಡಗಿದರು.
ಯುದ್ಧವನ್ನು ಶುರು ಮಾಡುವುದು ಸುಲಭ, ನಿಲ್ಲಿಸುವುದು ಕಷ್ಟ ಎನ್ನುವುದು ಅವರಿಗೆ ತಡವಾಗಿ ಹೊಳೆಯಿತು.
Next Story