ಮಗುವೊಂದು ಇನ್ನೊಂದು ಮಗುವಲ್ಲಿ ಕೇಳಿತು ‘‘ದೊಡ್ಡವರಾಗುವುದು ಎಂದರೆ ಏನು?’’
ಇನ್ನೊಂದು ಮಗು ಉತ್ತರಿಸಿತು ‘‘ನಾವು ದೊಡ್ಡವರಾದರೆ ಸುಳ್ಳು ಹೇಳಬಹುದು, ಜಗಳವಾಡಬಹುದು, ಕೆಟ್ಟದನ್ನು ಮಾಡಬಹುದು. ಸಣ್ಣನವರಿಗೆ ಅದೆಲ್ಲ ಮಾಡಲು ಅವಕಾಶವಿಲ್ಲ’’.