ರೋಗ
ಆ ರೋಗ ಪೀಡಿತ ವ್ಯಕ್ತಿ ಆ ದಾರಿಯಲ್ಲಿ ಕಳೆದ ಒಂದುವಾರದಿಂದ ಬಿದ್ದುಕೊಂಡಿದ್ದ.
ಮೈ ತುಂಬಾ ಹುಣ್ಣು. ಮುತ್ತಿಕೊಂಡ ನೊಣಗಳು, ಹಸಿವು. ದೇಹ ಎಲುಬಿನ ಹಂದರ. ಮಳೆ, ಚಳಿಯಲ್ಲಿ ಸಾಯುವ ಹಂತದಲ್ಲಿದ್ದ.
ಒಂದು ದಿನ ಒಬ್ಬರು ಆತನನ್ನು ತನ್ನ ಮನೆಗೆ ಕರೆದುಕೊಂಡು ಹೋದರು. ಅವನನ್ನು ಮೀಯಿಸಿದರು. ಹುಣ್ಣುಗಳಿಗೆ ಔಷಧಿ ಹಚ್ಚಿದರು. ಅನ್ನಕೊಟ್ಟರು. ಈಗ ಜನರು ಎಚ್ಚೆತ್ತುಕೊಂಡರು. ‘‘ಅವನೇಕೆ ಆತನನ್ನು ಮನೆಗೆ ಕೊಂಡೊಯ್ದ...ಅವನಿಗೇನು ಲಾಭ? ಅವನ ಧರ್ಮದಲ್ಲಿರುವವರನ್ನು ಮೊದಲು ಸರಿ ಮಾಡಲಿ. ನಮ್ಮ ಧರ್ಮೀಯನ ಉಸಾಬರಿ ಅವನಿಗೇಕೆ?’’
ಸರಿ, ಜನ ಗುಂಪು ಸೇರಿದರು. ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಕೊನೆಗೂ ಆ ರೋಗಿಯನ್ನು ಆತನ ಮನೆಯಿಂದ ಹೊರತಂದರು.
ಇದೀಗ ಮತ್ತೆ ಆ ರೋಗಿ ಅದೇ ಬೀದಿಯಲ್ಲಿ ಬಿದ್ದುಕೊಂಡಿದ್ದಾನೆ.
Next Story