ವ್ಯಾಪಾರ
ಆವರೆಗೆ ಕೃಷಿಯಲ್ಲೇ ಆಸಕ್ತಿ ಹೊಂದಿದ್ದ ಸಂತನಿಗೆ ಒಂದಿಷ್ಟು ಸಮಯ ವ್ಯಾಪಾರ ಮಾಡಿದರೆ ಹೇಗೆ ಅನ್ನಿಸಿತು.
ಸರಿ, ಸಂತ ಊರ ಮಧ್ಯೆ ಅಂಗಡಿಯಿಟ್ಟ.
ಪ್ರಾಮಾಣಿಕವಾಗಿ ವ್ಯಾಪಾರ ಮಾಡುತ್ತಿದ್ದುದರಿಂದಲೋ ಏನೋ, ವ್ಯಾಪಾರದಲ್ಲಿ ನಷ್ಟ.
ಬೇರೆ ಬೇರೆ ಬಗೆಯ ವ್ಯಾಪಾರಕ್ಕಿಳಿದ. ಆದರೆ ಲಾಭವಿಲ್ಲ.
ಕಟ್ಟ ಕಡೆಗೆ ಆತ, ಗುಜರಿ ಅಂಗಡಿಯನ್ನು ಇಟ್ಟ.
ಯಾರೋ ತಮಾಷೆಯ ಧ್ವನಿಯಲ್ಲಿ ಸಂತನ ಬಳಿಕ ಕೇಳಿದರು ‘‘ಹೋಗಿ ಹೋಗಿ ಗುಜರಿ ಅಂಗಡಿ ಇಟ್ಟಿದ್ದೀರಲ್ಲ ಗುರುಗಳೇ...ಏನಾಯಿತು?’’
‘‘ಸತ್ಯ, ನ್ಯಾಯಗಳೆಲ್ಲ ಗುಜರಿ ಸೇರುತ್ತಿರುವ ದಿನಗಳು ಇವು. ಅದಕ್ಕೆ ಗುಜರಿ ಅಂಗಡಿಯನ್ನು ಇಟ್ಟೆ’’
Next Story