ಜ್ಞಾನ
ಪಂಡಿತನೊಬ್ಬನಿಗೆ ತನ್ನ ಜ್ಞಾನವನ್ನು ಇತರರಿಗೆ ಪ್ರದರ್ಶಿಸುವ ಚಟವೊಂದಿತ್ತು.
ಸಂತನ ಆಶ್ರಮಕ್ಕೆ ಬಂದವನೇ ತನ್ನ ಜ್ಞಾನವನ್ನು ಮುಂದಿಟ್ಟು ಇತರರೊಂದಿಗೆ ಚರ್ಚೆಗೆ ಇಳಿಯುತ್ತಿದ್ದ.
ಒಂದು ದಿನ ಸಂತನ ಬಳಿ ಆತ ಕೇಳಿದ ‘‘ಗುರುಗಳೇ, ನೀವು ನನ್ನ ಜ್ಞಾನವನ್ನು ಬೇಕಾದರೆ ಪರೀಕ್ಷಿಸಬಹುದು’’
ಸಂತ ನಕ್ಕು ಹೇಳಿದ ‘‘ಜ್ಞಾನ ಬೆಳಕಿನ ಹಾಗೆ. ತನ್ನನ್ನು ತಾನು ಪ್ರದರ್ಶಿಸುವುದು ಜ್ಞಾನವಲ್ಲ. ಇಲ್ಲಿ ಹೊರಗೆ ಕಣ್ಣಾಯಿಸಿ. ಬೆಳಕನ್ನು ನಾವು ಕಾಣಲಾರೆವು. ಆದರೆ ಬೆಳಕಿನ ಮೂಲಕ ಎಲ್ಲವನ್ನೂ ನೋಡುತ್ತಿದ್ದೇವೆ’’
Next Story