ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ಪೆಮ್ಮಂಡ ಪೊನ್ನಪ್ಪ ಆಯ್ಕೆ
ಮಡಿಕೇರಿ ಡಿ.12 : ಕೊಡವ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ವಿರಾಜಪೇಟೆ ತಾಲ್ಲೂಕಿನ ಬಲ್ಯಮಂಡೂರು ಗ್ರಾಮದ ಪೆಮ್ಮಂಡ ಕೆ.ಪೊನ್ನಪ್ಪ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮಡಿಕೇರಿಯ ಕರಡ ಗ್ರಾಮದ ಐತಿಚಂಡ ರಮೇಶ್ ಉತ್ತಪ್ಪ, ಸದಸ್ಯರುಗಳಾಗಿ ಮಾಯಮುಡಿ ಗ್ರಾಮದ ಎ.ಎಸ್.ಮೊಣ್ಣಪ್ಪ (ಟಾಟು), ಕೆದಮುಳ್ಳೂರು ಗ್ರಾಮದ ಬೀಕಚಂಡ ಬೆಳ್ಯಪ್ಪ, ಹುದಿಕೇರಿ ಗ್ರಾಮದ ಚಂಗುಲಂಡ ಸೂರಜ್, ಮಡಿಕೇರಿಯ ತೋರೇರ ಎಂ. ಮುದ್ದಯ್ಯ, ಕಾನೂರು ಗ್ರಾಮದ ಸುಳ್ಳಿಮಾಡ ಭವಾನಿ ಕಾವೇರಪ್ಪ, ಕುರ್ಚಿ ಗ್ರಾಮದ ಅಜ್ಜಮಾಡ ಪಿ. ಕುಶಾಲಪ್ಪ, ತೋರ ಗ್ರಾಮದ ಕುಡಿಯರ ಶಾರದ, ಮಡಿಕೇರಿಯ ಕೋತೂರು ಮನ್ನಕ್ಕಮನೆ ಬಾಲಕೃಷ್ಣ, ಮುಕ್ಕೋಡ್ಲು ಗ್ರಾಮದ ಹಂಚೆಟ್ಟಿರ ಮನು ಮುದ್ದಪ್ಪ, ಬೇತು ಗ್ರಾಮದ ಹೆಚ್.ಟಿ.ಗಣಪತಿ, ಕೆದಮಳ್ಳೂರು ಗ್ರಾಮದ ಅಮ್ಮಣಿಚಂಡ ಪ್ರವೀಣ್ ಚೆಂಗಪ್ಪ, ಸೋಮವಾರಪೇಟೆಯ ಕುಶಾಲನಗರದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಆಯ್ಕೆಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಹಾಗೂ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಿ.ಎಸ್.ತಮ್ಮಯ್ಯ ಅವರ ಸಮ್ಮುಖದಲ್ಲಿ ಸರಕಾರದ ಆದೇಶದ ಪ್ರತಿಯನ್ನು ಪೆಮ್ಮಂಡ ಕೆ.ಪೊನ್ನಪ್ಪ ಸ್ವೀಕರಿಸಿದರು.