‘‘ಗುರುಗಳೇ, ನೀವು ತೀರಿ ಹೋದ ಬಳಿಕ ನಮಗಾಗಿ ಏನನ್ನು ಉಳಿಸಿ ಹೋಗುತ್ತೀರಾ?’’ ಶಿಷ್ಯ ಕೇಳಿದ. ಹಾಸಿಗೆಯಲ್ಲಿ ಸುಸ್ತಾಗಿ ಮಲಗಿದ್ದ ಸಂತ ಪ್ರತಿಯಾಗಿ ಕೇಳಿದ ‘‘ನಿಮಗಾಗಿ ಇಡೀ ವಿಶ್ವವನ್ನೇ ಬಿಟ್ಟು ಹೋಗುತ್ತಿದ್ದೇನೆ. ಸಾಲದೇ?’’