ಬಂಟ್ವಾಳ, ಡಿ.20: ಕರೋಪಾಡಿ ಗ್ರಾಮದ ಮಾಂಬಾಡಿ ನಿವಾಸಿ ಎ. ಮೊಯ್ದಿನ್ (69) ಹೃದಯಾಘಾತದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾಗಿದರು.
ಮೊಯ್ದಿನ್ ಅವರು ರೈಲ್ವೆ ಇಲಾಖಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇತ್ತೀಚೆಗೆ ನಿವೃತ್ತಿ ಹೊಂದಿದ್ದರು.
ಮೃತರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.