ಬೆಳಗ್ಗೆ ಆತ ಬಾಳೆ ಹಣ್ಣು ತಿಂದು ಸಿಪ್ಪೆಯನ್ನು ರಸ್ತೆಗೆ ಎಸೆದಿದ್ದ.
ಮಧ್ಯಾಹ್ನ ಅದೇ ದಾರಿಯಲ್ಲಿ ಬಂದ ಆತನ ಮಗ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿ ಬಿದ್ದು ಕಾಲು ಮುರಿದುಕೊಂಡ. ರಾತ್ರಿ ಮಗುವಿನ ತಂದೆ, ಮಗ ಬೀಳುವುದಕ್ಕೆ ಕಾರಣರಾದವ ಮೇಲೆ ಎರ್ರಾಬಿರ್ರಿ ಎಗರಾಡುತ್ತಿದ್ದ.