ಯೋಧನೊಬ್ಬನ ಮೃತದೇಹ ಊರಿಗೆ ಬಂತು. ಊರಲ್ಲಿ ದೇಶ ಪ್ರೇಮ ಜಾಗೃತಿಗೊಂಡಿತು. ಯುದ್ಧವಾಗಲಿ, ಶತ್ರು ದೇಶಕ್ಕೆ ಪಾಠ ಕಲಿಸಲಿ...ಎಂದು ಚೀರಿದರು. ಮೃತ ಯೋಧನ ತಂದೆ ಮಾತ್ರ ಅಳುತ್ತಿದ್ದರು ‘‘ಶಾಂತಿ ನೆಲೆಸಲಿ. ಯಾವ ಯೋಧನ ತಂದೆಯೂ ಕಣ್ಣೀರಿಡದಿರಲಿ...’’.