ನಿಯಂತ್ರಣ ಸಾಧ್ಯವಿಲ್ಲವೇ?
ಮಾನ್ಯರೇ,
ಈ ಹಿಂದೆ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಗನ ಕಾಯಿಲೆ ಇದೀಗ ಡಿಸೆಂಬರ್ನಲ್ಲೂ ವಿವಿಧ ಕಡೆ ಕಾಣಿಸಿಕೊಂಡಿದೆ. ಈ ಕಾಯಿಲೆಯನ್ನು ಮೊದಲೇ ಪತ್ತೆ ಹಚ್ಚುವ ವೈದ್ಯಕೀಯ ಸಾಮಗ್ರಿಗಳ ಕೊರತೆ ರಾಜ್ಯದಲ್ಲಿರುವುದರಿಂದ ವೈರಾಣು ಆಧಾರಿತ ಕಾಯಿಲೆಗಳನ್ನು ಪತ್ತೆ ಹಚ್ಚುವ ಪ್ರಯೋಗ ನಡೆಸಲು ಸಾಧ್ಯವಾಗುತ್ತಿಲ್ಲ ಎನ್ನುವುದು ಖೇದಕರ ಸಂಗತಿ.
ಇನ್ನಾದರೂ ಮಂಗನ ಕಾಯಿಲೆಯನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ದೊರಕಿಸುವ ಬಗ್ಗೆ ಗಂಭೀರವಾದ ಅಧ್ಯಯನ, ಪ್ರಯತ್ನ ಕೂಡಲೇ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖವಾಗಬೇಕಿದೆ.
Next Story