ಒಬ್ಬ ಕುರುಡ ಲೈಬ್ರರಿಯಲ್ಲಿ ಕುಳಿತು ಪುಸ್ತಕವನ್ನು ಸುಮ್ಮನೆ ಕೈಯಲ್ಲಿ ಸ್ಪರ್ಶಿಸುತ್ತಿದ್ದ. ‘‘ಕುರುಡ ನೀನು. ಪುಸ್ತಕವನ್ನು ಅದು ಹೇಗೆ ಓದುವೆ?’’ ಕುರುಡ ನಕ್ಕು ಹೇಳಿದ ‘‘ಕೆಲವರು ಕಣ್ಣಿನಿಂದ ಪುಸ್ತಕ ಓದುತ್ತಾರೆ. ಕೆಲವರಿಗೆ ಪುಸ್ತಕವೇ ಕಣ್ಣಾಗಿ ಬಿಡುತ್ತದೆ’’