ಬೆಲೆ
ತರಕಾರಿ ಅಂಗಡಿಯ ಮುಂದೆ ನಿಂತಿದ್ದ ಬಡವ ಕೇಳಿದ ‘‘ಸ್ವಾಮಿ, ಟೊಮೆಟೋಗೆ ಕಿಲೋಗೆ ಎಷ್ಟು?’’
‘‘ನಲ್ವತ್ತು ರೂಪಾಯಿ...’’ ಅಂಗಡಿಯಾತ ಹೇಳಿದ.
ಬಡವನ ಮುಖ ನಿಸ್ತೇಜವಾಯಿತು. ‘‘ಯಾಕೆ ಬೇಡವೇ? ನಿಮಗೆ ಬೇಕಾದರೆ ಕಡಿಮೆ ಮಾಡಿ ಕೊಡುವ’’ ಅಂಗಡಿಯಾತ ಹೇಳಿದ.
‘‘ಇದು ನಾನೇ ಬೆಳೆದ ಟೊಮೆಟೋ ಕಣಪ್ಪ. ಮಧ್ಯವರ್ತಿಗಳು ನನಗೆ ಕಿಲೋಗೆ 50 ಪೈಸೆ ಕೊಟ್ಟು ತೆಗೆದುಕೊಂಡರು. ಇದೀಗ ಈ ಟೊಮೆಟೋವನ್ನು ಕೊಳ್ಳುವಷ್ಟು ದುಡ್ಡು ನನ್ನ ಬಳಿ ಇಲ್ಲ ಕಣಪ್ಪ’’ ಎನ್ನುತ್ತಾ ಆ ರೈತ ಅಲ್ಲಿಂದ ಕಾಲೆಳೆಯುತ್ತಾ ಹೊರಟ.
Next Story