ಯಡಿಯೂರಪ್ಪ ಬೆಂಬಲಿಗರ ಮುಂದೆಯೇ ಬಿಜೆಪಿಗೆ ಚಾಟಿ ಬೀಸಿದ ಸಿದ್ಧರಾಮಯ್ಯ
ಮೈಸೂರು,ಜ.11: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಹಾಗೂ ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಬೆಂಬಲಿಗರ ಮುಂದೆಯೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಿಜೆಪಿಗೆ ಚಾಟಿ ಬೀಸಿದರು.
ವೇದಿಕೆ ಮೇಲೆ ಆಸೀನರಾಗಿದ್ದ ಶ್ರೀನಿವಾಸಪ್ರಸಾದ್ ಆಪ್ತ ತಾ.ಪಂ.ಅಧ್ಯಕ್ಷ ಬಿ,ಎಸ್.ಮಹದೇವಪ್ಪ, ಯಡಿಯೂರಪ್ಪ ಬೆಂಬಲಿಗರಾದ ಜಿ.ಪಂ.ಸದಸ್ಯ ದಯಾನಂದಮೂರ್ತಿ, ನಗರಸಭಾ ಉಪಾಧ್ಯಕ್ಷ ಪ್ರದೀಪ್ ಅವರ ಮುಂದೆಯೇ ಅವರ ನಾಯಕರ ವಿರುದ್ಧ ಹರಿಹಾಯ್ದರು.
ಕಳೆದ ಉಪಚುನಾವಣೆಯಲ್ಲಿ ಬಿಜೆಪಿಯ ನಾಯಕರು ಒಂದುವರೆ ತಿಂಗಳಕಾಲ ನಂಜನಗೂಡಿನಲ್ಲಿಯೇ ಉಳಿದು ಕೊಂಡು ನಮ್ಮನ್ನು ಸೋಲಿಸಬೇಕು ಎಂದು ಇನ್ನಿಲ್ಲದ ಕಸರತ್ತು ನಡೆಸಿದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶೋಭಾಕರಂದ್ಲಾಜೆ ಸೇರಿದಂತೆ ಅನೇಕ ನಾಯಕರು ಇಲ್ಲೇ ಠಿಕಾಣಿ ಹೊಡೆದು ಯುಗಾದಿ ಹಬ್ಬವನ್ನು ಇಲ್ಲೇ ಯಾರದೋ ಮನೆಯಲ್ಲಿ ಆಚರಿಸಿದರು. ಆದರೆ ನೀವು ಅವರು ಮುಟ್ಟಿ ನೋಡಿಕೊಳ್ಳುವ ರೀತಿ ತೀರ್ಪು ನೀಡಿದಿರಿ. ಇನ್ನು ಮೇಲಕ್ಕೆ ಹೇಳಬಾರದು ಅಂತಹ ಏಟನ್ನು ಕೊಟ್ಟಿದ್ದೀರಿ ಎಂದು ಕುಟುಕಿದರು. ಈ ವೇಳೆ ತಮ್ಮ ನಾಯಕರ ವಿರುದ್ಧ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾತನಾಡುತ್ತಿದ್ದರೆ ಈ ಮುಖಂಡರು ಮೌನಕ್ಕೆ ಶರಣಾಗಿದ್ದರು.