‘‘ದೇವರನ್ನು ಹತ್ತಿರವಾಗಿಸುವುದು ಹೇಗೆ ಗುರುಗಳೇ?’’ ಶಿಷ್ಯ ಕೇಳಿದ. ‘‘ಹೆಚ್ಚು ಹೆಚ್ಚು ಸೂಕ್ಷ್ಮಜ್ಞರಾಗುವುದು’’ ಸಂತ ಹೇಳಿದ. ‘‘ಹಾಗೆಂದರೆ?’’ ‘‘ಪುಟ್ಟ ನಕ್ಷತ್ರವೊಂದನ್ನು ಹಗಲಿನ ಆಕಾಶದಲ್ಲೂ ಗುರುತಿಸುವಷ್ಟು ಮನಸ್ಸನ್ನು ಸಿದ್ಧಗೊಳಿಸುವುದು’’