ಫ್ರಾನ್ಸ್ ಸರ್ವಾಧಿಕಾರಿ ಲೂಯಿ ಗಿಲೆಟಿನ್ ಯಂತ್ರಕ್ಕೆ ಬಲಿ
1793: ಫ್ರಾನ್ಸ್ ಕ್ರಾಂತಿಯ ನಂತರ ಅಂದಿನ ಸರ್ವಾಧಿಕಾರಿ 16ನೇ ಲೂಯಿಯನ್ನು ವಿಚಾರಣೆ ನಡೆಸಿ ದೇಶದ್ರೋಹಿ ಎಂದು ಸಾಬೀತಾದ ನಂತರ ಪ್ಯಾರಿಸ್‌ನಲ್ಲಿ ಗಿಲೆಟಿನ್ ಯಂತ್ರಕ್ಕೆ ಬಲಿ ಕೊಡಲಾಯಿತು.
1921: ಇಟಲಿಯ ಲಿವೊರ್ನೊದಲ್ಲಿ ಅಮಾಡಿಯೊ ಬೊರ್ಡಿಗಾ ಹಾಗೂ ಅಂಟೊನಿಯೊ ಗ್ರಾಮ್ಸ್‌ಕಿಯಿಂದ ಇಟಾಲಿಯನ್ ಕಮ್ಯುನಿಸ್ಟ್ ಪಾರ್ಟಿ ಸ್ಥಾಪನೆಗೊಂಡಿತು.
1943: ಎರಡನೇ ವಿಶ್ವ ಮಹಾಯುದ್ಧದ ಭಾಗವಾಗಿ ಸೋವಿಯತ್ ಪಡೆಗಳು ಜರ್ಮನಿ ವಶಪಡಿಸಿಕೊಂಡಿದ್ದ ಸ್ಟಾಲಿನ್‌ಗಾರ್ಡ್ ಸಮೀಪದ ಗುಮಾರ್ಕ್‌ವಿಮಾನ ನಿಲ್ದಾಣವನ್ನು ಮರು ವಶಪಡಿಸಿಕೊಂಡವು.
1950: ಕವಿ, ಲೇಖಕ ಟಿ.ಎಸ್. ಏಲಿಯಟ್‌ರ ನಾಟಕ ‘ದ ಕಾಕ್‌ಟೇಲ್ ಪಾರ್ಟಿ’ ನ್ಯೂಯಾರ್ಕ್‌ನಲ್ಲಿ ತನ್ನ ಪ್ರಥಮ ಪ್ರದರ್ಶನ ಕಂಡಿತು.
1954: ವಿಶ್ವದ ಪ್ರಥಮ ಪರಮಾಣು ಜಲಾಂತರ್ಗಾಮಿ ನೌಕೆ ನಾಟಿಲಸ್ ಇಂದು ಚಾಲನೆಗೊಂಡಿತು. ಇದು ಅಂದಿನ ಪ್ರಥಮ ಮಹಿಳೆಯಾಗಿದ್ದ ಮಾಮಿ ಐಸೆನ್‌ಹೋವರ್ ಅವರಿಂದ ಪ್ರಾಯೋಜಿಸಲ್ಪಟ್ಟಿತ್ತು.
1996: ಇಂಡೋನೇಶ್ಯಾ ಸುಮಾತ್ರಾ ದ್ವೀಪಪ್ರದೇಶದ ತೀರದಲ್ಲಿ ಅನಿರೀಕ್ಷಿತ ಚಂಡಮಾರುತ ಬೀಸಿದ ಪರಿಣಾಮ ಮಿತಿಮೀರಿ ಜನರನ್ನು ತುಂಬಿದ್ದ ಹಡಗೊಂದು ಮುಳುಗಿ 340 ಜನರು ಸಾವಿಗೀಡಾದರು.
1945: ಭಾರತದ ಕ್ರಾಂತಿಕಾರಿ ಸ್ವಾತಂತ್ರ ಹೋರಾಟಗಾರ, ಐಎನ್‌ಎದ ಪ್ರಮುಖ ಸಂಘಟಕರಲ್ಲೊಬ್ಬರಾದ ರಾಶ್ ಬಿಹಾರಿ ಬೋಸ್ ಇಂದು ನಿಧನರಾದರು.