ಬಿಸಿಗಾಳಿಗೆ ಕರಟಿ ಉದುರಿದ ಬಾವಲಿಗಳು
ಪ್ರಪಂಚೋದ್ಯ
ಆಸ್ಟೇಲಿಯಾದ ಆಗಸದಿಂದ ನೂರಾರು ಬಾವಲಿಗಳು ಸುಟ್ಟು ಕೆಳಗೆ ಬಿದ್ದಿವೆ. ಆಸ್ಟ್ರೇಲಿಯಾದಲ್ಲಿ ಬೀಸುತ್ತಿರುವ ಬಿಸಿ ಗಾಳಿ ಇದಕ್ಕೆ ಕಾರಣ. ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್‌ನ ಕ್ಯಾಂಪ್‌ಬೆಲ್ ಟೌನ್‌ನಲ್ಲಿ ಈ ಬಾರಿ 44.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇದರಿಂದ ಈ ನಗರದ ರೈಲ್ವೆ ನಿಲ್ದಾಣದ ಸಮೀಪ ಹೇರಳವಾಗಿ ಕಂಡು ಬರುವ ನರಿ ಬಾವಲಿಗಳು ಸುಟ್ಟು ಹೋಗಿವೆ. ಈ ಬಾವಲಿಗಳನ್ನು ರಕ್ಷಿಸಲು ಸ್ವಯಂಸೇವಾ ಕಾರ್ಯಕರ್ತರು ಪ್ರಯತ್ನಿಸಿದ್ದಾರೆ. ಆದರೆ, ಅವರಿಗೆ 204 ಬಾವಲಿ ಮರಿಗಳನ್ನು ಮಾತ್ರ ರಕ್ಷಿಸಲು ಸಾಧ್ಯವಾಯಿತು. ಬಾವಲಿಗಳು ಸಂಪೂರ್ಣವಾಗಿ ಬೆಂದು ಹೋಗಿವೆ. ಅವುಗಳ ಮೆದುಳಿಗೆ ಹಾನಿಯಾಗಿದೆೆ. ಇದರಿಂದ ಅವುಗಳು ಕೆಳಗೆ ಬೀಳುತ್ತಿದ್ದವು ಎಂದು ಕ್ಯಾಂಪ್‌ವೆಲ್ ಪಟ್ಟಣದ ಕಾಲನಿ ಮ್ಯಾನೇಜರ್ ಕಾಟೆ ರ್ಯಾನ್ ತಿಳಿಸಿದ್ದಾರೆ. ಹೆಲ್ಪ್ ಸೇವ್ ದ ವೈಲ್ಡ್‌ಲೈಫ್ ಹಾಗೂ ಕ್ಯಾಂಪ್‌ಬೆಲ್‌ಟೌನ್‌ನ ಬುಶ್‌ಲ್ಯಾಂಡ್‌ನೊಂದಿಗೆ ಸಂರಕ್ಷಕರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ‘‘ಬಿಸಿ ಗಾಳಿಯಿಂದ ಸಾವಿಗೀಡದ ಬಾವಲಿಗಳ ಸಂಖ್ಯೆ 200ಕ್ಕೆ ತಲುಪಿದೆ. ಇದು ಹೃದಯ ವಿದ್ರಾವಕ ಘಟನೆ’’ ಎಂದು ಹೇಳಿದ್ದಾರೆ.