ಸೀತಾ ಎಂ.ರೈ
ಮಂಗಳೂರು, ಫೆ. 6: ಉಳ್ಳಾಲ ನಗರಸಭೆ ಸದಸ್ಯ ದಿನೇಶ್ ರೈ ಅವರ ತಾಯಿ, ತೊಕ್ಕೊಟ್ಟು ಕಲ್ಲಾಪು ನಿವಾಸಿ ಸೀತಾ ಎಂ. ರೈ (78) ಅವರು ಮಂಗಳವಾರ ನಿಧನರಾದರು.
ವಿಧಾನಸಭೆ ಅಧಿವೇಶನದಲ್ಲಿರುವ ಆಹಾರ ಸಚಿವ ಯು.ಟಿ. ಖಾದರ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಿಕರಿಗೆ ದುಖ ಸಹಿಸುವ ಶಕ್ತಿಯನ್ನು ದೇವರು ನೀಡಲೆಂದು ಯು.ಟಿ.ಖಾದರ್ ಸಂತಾಪ ವ್ಯಕ್ತಪಡಿಸಿದರು.
ಸಚಿವರು ಇಂದು ಸಂಜೆ ಬೆಂಗಳೂರಿನಿಂದ ವಿಮಾನ ಮೂಲಕ ಮಂಗಳೂರು ಆಗಮಿಸಿ ಮೃತರ ಮನೆಗೆ ತೆರಳಲಿದ್ದಾರೆ. ನಂತರ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
Next Story