ಎಂ.ವೆಂಕಮ್ಮ ಸಪಲ್ಯ
ಬಂಟ್ವಾಳ, ಫೆ. 14: ತಾಲೂಕಿನ ಪಂಜಿಕಲ್ಲು ಗ್ರಾಮದ ಮುಂಡಬೈಲು ನಿವಾಸಿ, ಪ್ರಗತಿಪರ ಕೃಷಿಕ ದಿ. ಎಂ.ಕೊರಗಪ್ಪ ಸಪಲ್ಯ ಅವರ ಪತ್ನಿ ಎಂ.ವೆಂಕಮ್ಮ ಸಪಲ್ಯ (90) ಅವರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಸಂಜೆ ನಿಧನರಾದರು.
ಮೃತರಿಗೆ ಐವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಇದ್ದಾರೆ. ಮೃತರು ಮೂಡುಬಿದಿರೆ ಶ್ರೀಯಾನ್ ಕುಟುಂಬಿಕರ ಮೂಲಸ್ಥಾನದ ಹಿರಿಯ ಸದಸ್ಯರಾಗಿದ್ದರು. ಮೃತರ ಅಂತ್ಯಕ್ರಿಯೆ ಮುಂಡಬೈಲು ಮನೆ ಸಮೀಪದ ಗದ್ದೆಯಲ್ಲಿ ಮಂಗಳವಾರ ರಾತ್ರಿ ನೆರವೇರಿತು.
Next Story