ಮುಹಮ್ಮದ್ ಬಾವ
ಮಂಗಳೂರು, ಫೆ. 20: ಗುರುಪುರ ಕೈಕಂಬದ ಮಳಲಿ ಬೆರ್ಮರಗುಡ್ಡೆ ನಿವಾಸಿ ಮುಹಮ್ಮದ್ ಬಾವ (80) ಮಂಗಳವಾರ ತನ್ನ ಸ್ವಗೃಹದಲ್ಲಿ ನಿಧನರಾದರು.
ಕಳೆದ ಕೆಲವು ದಿನಗಳಿಂದ ಅಸೌಖ್ಯದಲ್ಲಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮೂಳೂರು ಜುಮಾ ಮಸೀದಿಯಲ್ಲಿ ಲುಹರ್ ನಮಾಝಿನ ಮುಂಚೆ ನೆರವೇರಿತು.
Next Story