ಕೊಳ್ಳೇಗಾಲ: ತಾಯಿ, ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕರಿಂದ ಶಿಲಾನ್ಯಾಸ
ಕೊಳ್ಳೇಗಾಲ,ಫೆ.24: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ 8 ಕೋಟಿ ವೆಚ್ಚದಲ್ಲಿ 30 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಶಾಸಕ ಎಸ್.ಜಯಣ್ಣ ಶಿಲಾನ್ಯಾಸ ನೇರವೇರಿಸಿದರು.
ನಂತರ ಶಾಸಕ ಎಸ್.ಜಯಣ್ಣ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಸರ್ಕಾರದ ಈ ಸೌಲಭ್ಯವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಸಾದ್ ಅವರು ಮಾತನಾಡಿ, ಪ್ರತಿ ತಿಂಗಳಲ್ಲಿ ತಾಯಿ ಮಗು ಆಸ್ಪತ್ರೆಯಲ್ಲಿ 130 ಕ್ಕೂ ಹೆಚ್ಚು ಹೆರಿಗೆ ಈ ಆಸ್ಪತ್ರೆಯಲ್ಲಿ ಆಗುವುದರಿಂದ ಸರ್ಕಾರ ತಾಲೂಕು ಕೇಂದ್ರಕ್ಕೆ ತಾಯಿ ಮಕ್ಕಳ ಆಸ್ಪತ್ರೆ ಮಂಜೂರು ಮಾಡಿದೆ. ಈ ಆಸ್ಪತ್ರೆ ನಿರ್ಮಾಣಗೊಂಡ ನಂತರ ಹೊರರೋಗಿ ವಿಭಾಗ, ಕ್ಷಿಕಿರಣ, ಅಲ್ಟ್ರಾಸೌಂಡ್ ಕೊಠಡಿ, ಔಷಧಿ ಉಗ್ರಾಣ ಮತ್ತು ವಿತರಣೆ ವಿಭಾಗ ಪ್ರಯೋಗಲಾಯ, ರಕ್ತ ಸಂಗ್ರಹಣ ಕೇಂದ್ರ, ಲಘು ಶಸ್ತ್ರ ಚಿಕಿತ್ಸೆ ಘಟಕ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಜಿ.ಪಂ ಉಪಾಧ್ಯಕ್ಷ ಯೋಗೇಶ್, ನಗರಸಭೆ ಅಧ್ಯಕ್ಷ ಶಾಂತರಾಜು, ಉಪಾರ್ಧಯಕ್ಷ ಶಿವಾನಂದ, ಸದಸ್ಯರಾದ ಅಕ್ಮಲ್, ರಾಘವೇಂದ್ರ, ಕಲೀಂಉಲ್ಲಾ, ಪ್ರಶಾಂತ್, ಶಾಸಕರ ಆಪ್ತ ಕಾರ್ಯದರ್ಶಿ ಮುಡಿಗುಂಡ ಶಾಂತರಾಜು, ಆಡಳಿತ ವೈದ್ಯಾಧಿಕಾರಿ ಡಾ.ರವೀಂದ್ರ, ಡಿವೈಎಸ್ಪಿ ಪುಟ್ಟಮಾದಯ್ಯ ಹಾಗೂ ಇನ್ನಿತರರು ಹಾಜರಿದ್ದರು.