ಭಾರತ ಪೋಲಿಯೊ ಪೀಡಿತ ರಾಷ್ಟ್ರಗಳ ಪಟ್ಟಿಯಿಂದ ಹೊರಕ್ಕೆ
1830: ಖ್ಯಾತ ಫ್ರೆಂಚ್ ಲೇಖಕ, ನಾಟಕಕಾರ ವಿಕ್ಟರ್ ಹ್ಯುಗೊರ ನಾಟಕ ‘ಹರ್ನಾನಿ’ ಪ್ಯಾರಿಸ್‌ನಲ್ಲಿ ಇಂದು ತನ್ನ ಪ್ರಥಮ ಪ್ರದರ್ಶನ ಕಂಡಿತು.
1907: ವಿಶ್ವಪ್ರಸಿದ್ಧ ನಾಟಕಕಾರ ಜಾರ್ಜ್ ಬರ್ನಾಡ್ ಷಾ ಅವರ ಪ್ರಸಿದ್ಧ ನಾಟಕ ಫಿಲಾಂಡರರ್ ಲಂಡನ್‌ನಲ್ಲಿ ಇಂದು ಪ್ರಥಮ ಪ್ರದರ್ಶನ ಕಂಡಿತು.
1908: ಹಡ್ಸನ್ ನದಿಗೆ ನಿರ್ಮಿಸಲಾದ ಪ್ರಥಮ ಸುರಂಗ ರೈಲು ಮಾರ್ಗಕ್ಕೆ ಚಾಲನೆ ದೊರೆಯಿತು.
1925: ಜಪಾನ್ ಹಾಗೂ ಸೋವಿಯತ್ ಒಕ್ಕೂಟಗಳ ಮಧ್ಯೆ ರಾಜತಾಂತ್ರಿಕ ಸಂಬಂಧಗಳು ಆರಂಭಗೊಂಡವು.
1945: ಜಾಗತಿಕ ಎರಡನೇ ಮಹಾಯುದ್ಧದ ಭಾಗವಾಗಿ ಟರ್ಕಿ ಜರ್ಮನಿಯ ವಿರುದ್ಧ ಯುದ್ಧ ಸಾರಿತು.
1948: ಝೆಕೊಸ್ಲೊವಾಕಿಯಾದಲ್ಲಿ ಕಮ್ಯುನಿಸ್ಟ್ ಆಡಳಿತ ಆರಂಭವಾಯಿತು.
1962: ಜವಾಹರಲಾಲ್ ನೆಹರೂ ನೇತೃತ್ವದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1962ರ ಸಾರ್ವತ್ರಿಕ ಚುನಾವಣೆಯಲ್ಲಿ 494 ಲೋಕಸಭಾ ಸ್ಥಾನಗಳಲ್ಲಿ 361 ಸ್ಥಾನ ಗಳಿಸುವ ಮೂಲಕ ದೇಶದ ಚುಕ್ಕಾಣಿ ಹಿಡಿಯಿತು. ಈ ಚುನಾವಣೆಯಲ್ಲಿ ಸಿಪಿಐ 29 ಹಾಗೂ ಭಾರತೀಯ ಜನಸಂಘ 14 ಸ್ಥಾನಗಳನ್ನು ಪಡೆದಿದ್ದವು.
1969: ನಾಸಾದ ಬಾಹ್ಯಾಕಾಶ ನೌಕೆ ಮರೀನರ್ 6 ಇಂದು ಉಡಾವಣೆಗೊಂಡಿತು. ಮಂಗಳ ಗ್ರಹದ ಅಧ್ಯಯನಕ್ಕೆ ಇದನ್ನು ಉಡಾಯಿಸಲಾಯಿತು.
1988: ದಕ್ಷಿಣ ಕೊರಿಯಾದಿಂದ ಸಂವಿಧಾನ ಅಂಗೀಕಾರ.
2012: ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ಪೋಲಿಯೊ ಪೀಡಿತ ರಾಷ್ಟ್ರಗಳ ಪಟ್ಟಿಯಿಂದ ಹೊರಗಿಟ್ಟಿತು.
2014: ಬೊಕೊ ಹರಾಮ್ ಉಗ್ರರ ದಾಳಿಗೆ ನೈಜೀರಿಯಾದ ಬುನಿ ಎಂಬಲ್ಲಿ 50 ವಿದ್ಯಾರ್ಥಿಗಳು ಬಲಿಯಾದರು.…