ಆತ ನಗರದಲ್ಲಿ ಬಸ್ಗಾಗಿ ಕಾಯುತ್ತಿದ್ದ.
ಅಷ್ಟರಲ್ಲಿ ಯಾರೋ ಕೂಗಿ ಹೇಳಿದರು ‘‘ಸಾರ್, ಯಾರೋ ನಿಮ್ಮನ್ನು ಕರೆಯುತ್ತಿದ್ದಾರೆ’’
‘‘ಯಾರು?’’ ಆತ ಮರು ಪ್ರಶ್ನಿಸಿದ.
ಅಷ್ಟೇ, ವೇಗವಾಗಿ ಬಂದ ವಾಹನವೊಂದು ಆತನಿಗೆ ಢಿಕ್ಕಿ ಹೊಡೆಯಿತು. ಅವನು ಅಷ್ಟು ದೂರದಲ್ಲಿ ಹೆಣವಾಗಿ ಬಿದ್ದಿದ್ದ.
ಹಾಗಾದರೆ ಅವನನ್ನು ಕರೆದವರು ಯಾರು?