ಗುಬ್ಬಚ್ಚಿ
ಸಂತನ ತಿಳುವಳಿಕೆಯನ್ನು ಪರೀಕ್ಷಿಸಲು ಶಿಷ್ಯನೊಬ್ಬ ಮುಷ್ಟಿಯೊಳಗೆ ಗುಬ್ಬಚ್ಚಿಯೊಂದನ್ನು ಬಚ್ಚಿಟ್ಟುಕೊಂಡು ಬಂದ.
ಆತ ಸಂತನಲ್ಲಿ ಕೇಳಿದ ‘‘ಗುಬ್ಬಚ್ಚಿ ಬದುಕಿದೆಯೇ, ಸತ್ತಿದೆಯೇ?’’
ಸಂತ ಸತ್ತಿದೆ ಎಂದರೆ ಹಾರಿ ಬಿಡುವುದು. ಬದುಕಿದೆ ಎಂದರೆ ಕೈಯಲ್ಲೇ ಸಾಯಿಸಿ ಅದನ್ನು ಗುರುವಿಗೆ ತೋರಿಸುವುದು.
ಸಂತ ಗಂಭೀರವಾಗಿ ಹೇಳಿದ ‘‘ಕೈಯಲ್ಲಿರುವ ಗುಬ್ಬಚ್ಚಿ ಸತ್ತಿದೆ’’
ಶಿಷ್ಯ ಗೆದ್ದ ಮುಖಭಾವದಲ್ಲಿ ಗುಬ್ಬಚ್ಚಿಯನ್ನು ಹಾರಿ ಬಿಟ್ಟು ಹೇಳಿದ ‘‘ನೀವು ಸೋತಿರಿ, ನಾನು ಗೆದ್ದೆ’’
‘‘ಗುಬ್ಬಚ್ಚಿಯನ್ನು ನಿನ್ನಂತಹ ಮೂರ್ಖನ ಕೈಯಿಂದ ರಕ್ಷಿಸಿ ನಾನೂ ಗೆದ್ದೆ’’ ಸಂತ ಹೇಳಿದ.
Next Story