ಸಾಧನೆಯ ಗುರಿ ಇದ್ದರೆ ಉಜ್ವಲ ಭವಿಷ್ಯ: ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ
ಮಂಡ್ಯ, ಮಾ.17: ವಿದ್ಯಾರ್ಥಿಗಳಲ್ಲಿ ಸಾಧನೆಯ ಗುರಿ ಇದ್ದರೆ ಉಜ್ವಲ ಭವಿಷ್ಯ ಕಾಣಬಹುದು ಎಂದು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅಭಿಪ್ರಾಯಪಟ್ಟಿದ್ದಾರೆ.
ನಗರದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಸಾಧಕರ ಸಾಧನೆಗಳನ್ನು ಅರಿತು ವಿದ್ಯಾರ್ಥಿಗಳು ಮುನ್ನಡೆದರೆ ಸಾಧನೆಯ ಹಾದಿ ಸುಗಮವಾಗಲಿದೆ ಎಂದರು.
ಪ್ರತಿಯೊಬ್ಬರ ಬದುಕಿನಲ್ಲಿ ಸಾಧನೆಯ ಛಲ ಇರಲಿ. ಸವಾಲಾಗಿ ಸ್ವೀಕರಿಸುವ ಮನೋಭಾವದಿಂದ ಸಾಧನೆ ಸಾಧ್ಯ. ವಿದ್ಯಾರ್ಥಿಗಳು ಸಾಧಕರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಕೊಳಗೇರಿಯ ಸಾಮಾನ್ಯ ವ್ಯಕ್ತಿ ದೊಡ್ಡಮಟ್ಟದ ಅಧಿಕಾರಿಯಾದದ್ದು ದೊಡ್ಡ ಸಾಧನೆ. ಇಂತಹ ಸಾಧಿಸುವ ಛಲ ಪ್ರತಿಯೊಬ್ಬರಲ್ಲಿಯೂ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಇರಲಿ ಎಂದು ಹೇಳಿದರು.
ಜನತಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಚ್. ಹೊನ್ನಪ್ಪ, ಕಾಲೇಜಿನ ಪ್ರಾಂಶುಪಾಲ ಡಾ.ಕೆ. ಚನ್ನಕೃಷ್ಣಯ್ಯ, ಟ್ರಸ್ಟಿಗಳಾದ ಶ್ರೀಧರ್, ಚನ್ನೇಗೌಡ, ವಿದ್ಯಾರ್ಥಿ ಮುಖಂಡರಾದ ಸುಪ್ರೀಯಾ, ಪ್ರೀತಿ, ಮಾಲಾಶ್ರೀ, ಕಾವ್ಯ, ರೂಪ, ಕಾವ್ಯಶ್ರೀ ಉಪಸ್ಥಿತರಿದ್ದರು.