ಗುಂಡ್ಲುಪೇಟೆ: ಅರಣ್ಯ ರಕ್ಷಕ ಮುರುಗೆಪ್ಪ ತಮ್ಮಣಗೋಳ್ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆ
ಗುಂಡ್ಲುಪೇಟೆ,ಮಾ.21: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸಜೀವ ದಹನವಾದ ಅರಣ್ಯ ರಕ್ಷಕ ಮುರುಗೆಪ್ಪ ತಮ್ಮಣಗೋಳ್ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಲು ಆಯ್ಕೆ ಮಾಡಲಾಗಿದೆ.
ಕಳೆದ ವರ್ಷ ಫೆ 16ರಂದು ಕಲ್ಕೆರೆ ವಲಯದಲ್ಲಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ರಕ್ಷಕ ಮುರುಗೆಪ್ಪ ಒಬ್ಬ ಅರಣ್ಯಾಧಿಕಾರಿ ಹಾಗೂ ಇಬ್ಬರು ಸಹೋದ್ಯೋಗಿಗಳನ್ನು ರಕ್ಷಿಸಿದ್ದರು. ನಂತರ ವ್ಯಾಪಿಸಿದ ಹೊಗೆಯಿಂದ ಉಸಿರುಕಟ್ಟಿ ಬೆಂಕಿಯಲ್ಲಿ ಸಜೀವ ದಹನವಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಹೆಸರನ್ನು ಆಯ್ಕೆಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದರು.
Next Story