ಇಲ್ಲೊಬ್ಬ ಆಮೆ ಸಂರಕ್ಷಕ
ಪ್ರಪಂಚೋದ್ಯ
ಒಡಿಶಾ ಭುವನೇಶ್ವರದಿಂದ 80 ಕಿ.ಮೀ. ದೂರದಲ್ಲಿರುವ ದಲುವಾಕಾನಿಯ ಸೌಮ್ಯರಂಜನ್ ಬಿಸ್ವಾಲ್ ಬಾಲಕನಾಗಿರುವಾಗ ತನ್ನ ಗ್ರಾಮದ ಸಮುದ್ರ ಕಿನಾರೆಯಲ್ಲಿ ಕಾಯುತ್ತಿದ್ದ. ಯಾಕೆಂದರೆ ಸಾವಿರಾರು ಪುಟ್ಟ ಅಲಿವರ್ ರಿಡ್ಲ್ ಆಮೆಗಳು ಮೊಟ್ಟೆ ಇರಿಸಲು ಕಡಲ ತೀರಕ್ಕೆ ಬರುವುದನ್ನು ನೋಡಲು.
ಈ ಅಲಿವರ್ ರಿಡ್ಲೆ ಆಮೆಗಳು ಸಾವಿರಾರು ಮೈಲು ಕ್ರಮಿಸಿ ಕಡಲ ತೀರಕ್ಕೆ ಬರುತ್ತವೆ. ಇಷ್ಟೊಂದು ಸಂಖ್ಯೆ ಆಮೆಗಳು ಮೊಟ್ಟೆ ಇರಿಸಲು ಕಡಲ ತೀರಕ್ಕೆ ಆಗಮಿಸುವುದನ್ನು ಜಗತ್ತಿನ ಎಲ್ಲಿ ಕೂಡ ನಾವು ನೋಡಲು ಸಾಧ್ಯವಿಲ್ಲ.
‘‘ಆಮೆಗಳು ಮೊಟ್ಟೆ ಇಡಲು ಇಲ್ಲಿಗೆ ಆಗಮಿಸುವುದನ್ನು ನಾವು ಬಾಲಕರಿರುವಾಗಲೇ ನೋಡುತ್ತಿದ್ದೆವು. ಆಮೆಗಳು ನಮ್ಮ ಗೆಳೆಯರಂತೆ. ಅವುಗಳು ಕತ್ತಲೆಯಲ್ಲಿ ಬರುತ್ತವೆ. ಮರಳಲ್ಲಿ ಹೊಂಡ ತೋಡುತ್ತವೆ ಹಾಗೂ ಡಝನ್‌ನಷ್ಟು ಮೊಟ್ಟೆಗಳನ್ನು ಇಡುತ್ತವೆ’’ ಎಂದು ಬಿಸ್ವಾಲ್ ಹೇಳುತ್ತಾರೆ.
ಬಿಸ್ವಾಲ್ ರಾತ್ರಿ ಬಿದಿರಿನ ಕೋಲು ಹಾಗೂ ಫ್ಲಾಶ್ ಲೈಟ್‌ನೊಂದಿಗೆ ಕಡಲ ತೀರಕ್ಕೆ ತೆರಳುತ್ತಾರೆ. ಆಮೆಗಳ ಗೂಡು ಗುರುತಿಸುತ್ತಾರೆ. ಅಗೆದು ಮೊಟ್ಟೆಗಳನ್ನು ಹೊರ ತೆಗೆಯುತ್ತಾರೆ. ಆ ಮೊಟ್ಟೆಗಳನ್ನು ಸ್ಪಲ್ಪ ದೂರದಲ್ಲಿ ಬೇಲಿ ಹಾಕಲಾದ ಜಾಗದಲ್ಲಿ ಸುರಕ್ಷಿತವಾಗಿ ಮರಿಯಾಗಲು ಇರಿಸುತ್ತಾರೆ. ಪತಾಕೆ ಇರಿಸಿ ಸ್ಥಳ ಗುರುತು ಮಾಡುತ್ತಾರೆ. ಈ ಕೆಲಸವನ್ನು ಅವರು ಆಮೆಗಳು ಮೊಟ್ಟೆ ಇಡುವ ಋತುಮಾದಲ್ಲಿ ನೂರಾರು ಬಾರಿ ಮಾಡುತ್ತಾರೆ.
‘‘ಎರಡು ದಶಲಕ್ಷದಷ್ಟು ಆಮೆಗಳು ಮೊಟ್ಟೆ ಇರಿಸಲು ಕಡಲ ತೀರಕ್ಕೆ ಸಾಮೂಹಿಕವಾಗಿ ಆಗಮಿಸುವ ಕಾಲವಿತ್ತು. ಇದನ್ನು ‘ಆಗಮನ’ ಎಂದು ಕರೆಯಲಾಗುತ್ತಿತ್ತು. ಆದರೆ, ಇಂದು ಆಮೆಗಳ ಸಂತತಿ ಕ್ಷೀಣಿಸುತ್ತಿದೆ. ಪ್ರತಿ ವರ್ಷ ಸಾವಿರಾರು ಆಮೆಗಳು ಸಾಯುತ್ತಿವೆ’’ ಎಂದು ಬಿಸ್ವಾಲ್ ಹೇಳುತ್ತಾರೆ.