ಮಧುರ ನಾಯರಿ
ಸಾಲಿಗ್ರಾಮ, ಮಾ.23: ‘ವಸುದೇವ ಕುಟುಂಬಕಂ’ ಸಿನಿಮಾದ ಸಂಗೀತ ನಿರ್ದೇಶಕ ಮಧುರ ನಾಯರಿ ತೀವ್ರ ಅನಾರೋಗ್ಯದಿಂದ ಸಾಲಿಗ್ರಾಮದ ತಮ್ಮ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು. ನಾಯರಿ ಅವರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
‘ಒಳಿತು ಮಾಡು ಮನಸ’ ಹಾಡಿನ ಸಂಗೀತ ನಿರ್ದೇಶನದ ಮೂಲಕ ಜನಪ್ರಿಯರಾಗಿರುವ ಮಧುರ ನಾಯರಿ ಅವರ ಬದುಕೇ ಶೋಕಗೀತವಾಗಿತ್ತು. ಸಂಗೀತ ಸಂಯೋಜಕರಾದ ಮಧುರ ನಾಯರಿ ಹೆಚ್ಚಾಗಿ ತೆರೆಮರೆಯಲ್ಲೇ ಇದ್ದವರು. ಸಂಗೀತಾಭಿಮಾನಿಗಳ ಬಹು ದೊಡ್ಡ ಬಳಗವನ್ನು ಮಧುರ ನಾಯರಿ ಹೊಂದಿದ್ದರು. ಖ್ಯಾತ ಗಾಯಕ ವಿಜಯ ಪ್ರಕಾಶ್ ಅವರಿಂದಲೂ ಅವರು ಹಲವು ಹಾಡು ಹಾಡಿಸಿದ್ದರು.
Next Story