ಶರೀಫ್ ದಾರಿಮಿ
ಮಂಗಳೂರು, ಮಾ. 29: ಮಾರಿಪಳ್ಳ ನಿವಾಸಿ ಶರೀಫ್ ದಾರಿಮಿ (35) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಸಂಜೆ ಆಸ್ಪತ್ರೆಯಲ್ಲಿ ನಿಧನರಾದರು.
ಅವರು ತಾಯಿ, ಪತ್ನಿ ಮತ್ತು ಇಬ್ಬರು ಪುತ್ರನ್ನು ಅಗಲಿದ್ದಾರೆ.
ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಶರೀಫ್ ದಾರಿಮಿ ಅವರನ್ನು ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಗುರುವಾರ ಸಂಜೆ ಸುಮಾರು 6 ಗಂಟೆ ಹೊತ್ತಿಗೆ ಅವರು ನಿಧನರಾದರು.
ಗುರುಪುರ ಪಳ್ಳಿಪ್ಪಾಡಿ ಜುಮಾ ಮಸೀದಿಯಲ್ಲಿ ಇಮಾಮರಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಇತರ ಮಸೀದಿ ಹಾಗೂ ಮದ್ರಸದಲ್ಲಿ ಮುಖ್ಯ ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.
Next Story