ತಲೆಯಿಲ್ಲದೆ ಬದುಕಿದ ಕೋಳಿ!
ಪ್ರಪಂಚೋದ್ಯ
ಇದೊಂದು ವಿಚಿತ್ರವಾದ ಕೋಳಿ. ಈ ಕೋಳಿಗೆ ತಲೆಯಿಲ್ಲ. ಬದಲಾಗಿ ರಕ್ತಸಿಕ್ತವಾದ ತಲೆಯ ಸ್ಪಲ್ಪ ಉಳಿಕೆ ಇದೇ. ಈ ಉಳಿಕೆಯೊಂದಿಗೆ ಇದು ಅತ್ತಿತ್ತ ಸಂಚರಿಸುತ್ತದೆ, ಅದಕ್ಕೇ ಈ ಕೋಳಿಯನ್ನು ವೈದ್ಯರು ನಿಜವಾದ ಹೆರಾಟಗಾರ ಎಂದು ಕರೆದಿರುವುದು.
ಈ ನಡುವೆ ಈ ಕೋಳಿ ತಲೆ ಹೇಗೆ ಕಳೆದುಕೊಂಡಿತು ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಇನ್ನೊಂದು ಪ್ರಾಣಿ ದಾಳಿ ಮಾಡಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಮೂಢರಂತೆ ವರ್ತಿಸುವ ಕೆಲವರನ್ನು ತಲೆಯಿಲ್ಲದ ಕೋಳಿ ಎಂದು ಕರೆಯುವುದುಂಟು. ಆದರೆ, ಈ ತಲೆಯಿಲ್ಲದ ಕೋಳಿ ಸುತ್ತಮುತ್ತ ಸಂಚರಿಸುತ್ತಾ ಜನರನ್ನು ಅಚ್ಚರಿಗೆ ದೂಡಿದೆ. ಹಲವು ಪ್ರಾಣಿ, ಪಕ್ಷಿಗಳು ಮಾನವನ ಮುಖದ ಲಕ್ಷಣವೂ ಸೇರಿದಂತೆ ವಿಲಕ್ಷಣವಾಗಿ ಜನಿಸುವುದುಂಟು. ಆದರೆ, ಈ ತಲೆಯಿಲ್ಲದ ಕೋಳಿ ಬದುಕಿರುವುದು ಇದೆಲ್ಲದಕ್ಕಿಂತಲೂ ವಿಚಿತ್ರವಾದುದು. ಥಾಯ್ಲೆಂಡ್ನ ಈ ತಲೆ ಕಳೆದುಕೊಂಡ ಕೋಳಿ ಸುಮಾರು ಒಂದು ವಾರಗಳ ಕಾಲ ಬದುಕಿದೆ.
ತಲೆಯಿಲ್ಲದ ಕೋಳಿ ಬದುಕಿರುವುದು ಇದೇ ಮೊದಲಲ್ಲ. ಈ ಹಿಂದೆ ಅಮೆರಿಕದ ಉಟಾಹ್ನಲ್ಲಿ ತಲೆಯಿಲ್ಲದ ಕೋಳಿ 18 ತಿಂಗಳುಗಳ ಕಾಲ ಜೀವಿಸಿತ್ತು.