ತುಮಕೂರು: ದಾಖಲೆಯಿಲ್ಲದ 10 ಲಕ್ಷ ರೂ. ಹಣ ವಶ
ಸಾಂದರ್ಭಿಕ ಚಿತ್ರ
ತುಮಕೂರು,ಎ.01: ಅಕ್ರಮವಾಗಿ ಚುನಾವಣೆಯಲ್ಲಿ ಹಂಚಲು ಹಣ ಸಾಗಿಸುತ್ತಿದ್ದ ವಾಹನ ಮತ್ತು ವಾಹನದ ಚಾಲಕನನ್ನು ಬಂಧಿಸಿರುವ ಪೊಲೀಸರು, ಆತನಿಂದ ಅಧಿಕೃತ ದಾಖಲೆಯಿಲ್ಲದ ಸುಮಾರು 10 ಲಕ್ಷ ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಶನಿವಾರ ರಾತ್ರಿ ನೆರೆಯ ಆಂಧ್ರಪ್ರದೇಶದ ಅಮರಾಪುರದಿಂದ ತುಮಕೂರಿಗೆ ಕಾರೊಂದರಲ್ಲಿ ಹಣ ಸಾಗಿಸುತ್ತಿರುವುದು ಚೆಕ್ಪೋಸ್ಟ್ ಬಳಿ ಕಾರನ್ನು ತಪಾಸಣೆಗೆ ಒಳಪಡಿಸಿದಾಗ ತಿಳಿದು ಬಂದಿದೆ. ಹಣದ ಜೊತೆಗೆ, ಹಣ ಸಾಗಿಸುತ್ತಿದ್ದ ಕಾರು ಹಾಗೂ ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story