ಮುಹಮ್ಮದ್ ಇಸ್ಮಾಯಿಲ್ ಬಂಟ್ವಾಳ
ಮಂಗಳೂರು, ಎ. 4: ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷರೂ, ಜನಪ್ರಿಯ ಸಮಾಜ ಸೇವಕರೂ ಆದ ಮುಹಮ್ಮದ್ ಇಸ್ಮಾಯಿಲ್ ಬಂಟ್ವಾಳ (58) ಅವರು ಬುಧವಾರ ಮಧ್ಯಾಹ್ನ ಕನ್ನಂಗಾರಿನ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಇಸ್ಮಾಯಿಲ್ ಮಾಜಿ ಉಪ ಮೇಯರ್ ಬಶೀರ್ ಬೈಕಂಪಾಡಿ ಅವರ ಸಹೋದರ. ಮೃತರು ಪತ್ನಿ, ನಾಲ್ಕು ಮಂದಿ ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅವರ ಅಂತ್ಯ ಸಂಸ್ಕಾರವು ಗುರುವಾರ ಬೆಳಗ್ಗೆ 9 ಗಂಟೆಗೆ ಕನ್ನಂಗಾರ್ ಜುಮಾ ಮಸೀದಿಯ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
Next Story