ಅಡುಗೆ ಅನಿಲ ಕಂಪೆನಿಗಳ ಕಣ್ಣು ತೆರೆಸಿದ್ದು...
ನರೇಂದ್ರ ನಾಯಕ್ ಜೀವನ ಕಥನ
ಭಾಗ 39
ಸ್ಟವ್ ಖರೀದಿ ಕಡ್ಡಾಯ ಮಾಡು ವುದು ನಿಯಮ ಬಾಹಿರ. ಈ ವಿರುದ್ಧವೂ ನಮ್ಮ ಸಮರವನ್ನು ಮುಂದುವರಿಸಲಾಯಿತು. ವಾಹನಗಳಿಗೆ ಪೆಟ್ರೋಲ್ ಹಾಕಲು ಹೋದಾಗ, ಆ ಬಂಕ್ನವರು ನೀವು ವಾಹನವನ್ನೂ ಇಲ್ಲೇ ಖರೀದಿಸಬೇಕೆಂದರೆ ಅದು ಸಾಧ್ಯವೇ? ಹಾಗೆಯೇ ಅಡುಗೆ ಅನಿಲ ಸಂಪರ್ಕದ ವೇಳೆ ಸ್ಟವ್ ಖರೀದಿಸಬೇಕೆಂಬ ನಿಯಮ ಕೂಡಾ ಕಾನೂನು ಬಾಹಿರ ಎಂಬುದು ನಿರ್ಬಂಧಿತ ವಾಣಿಜ್ಯ ವ್ಯವಹಾರ ಎಂದು ಪೆಟ್ರೋಲಿಯಂ ಸಚಿವಾಲಯಕ್ಕೆ ಮತ್ತೆ ಪತ್ರ ಬರೆದೆವು. ಅದಕ್ಕೆ ಪೂರಕವಾಗಿ ಯಾವುದೇ ರೀತಿಯಲ್ಲಿ ಸ್ಟವ್ ಖರೀದಿ ಕಡ್ಡಾಯಗೊಳಿಸದಂತೆ ಈಗ ಏಜೆನ್ಸಿಗಳಲ್ಲಿ ಆ ಬಗ್ಗೆ ಘೋಷಣೆಯನ್ನು ಹಾಕಲಾಗಿದೆ.
ಬಳಿಕ ಒಂದು ತಿಂಗಳ ಬಳಿಕ ಸಭೆ ನಡೆಯಿತಾದರೂ ಕಂಪೆನಿಯ ಕಡೆಯಿಂದ ಮಾತ್ರ ಯಾರೂ ಬಂದಿರಲಿಲ್ಲ. ಆಗ ಬಳಕೆದಾರರ ಶಿಕ್ಷಣ ಟ್ರಸ್ಟ್ನ ನಾವು ಮೂರು ಮಂದಿ ಕಂಪೆನಿಗಳ ಪರವಾಗಿ ವೇದಿಕೆಯಲ್ಲಿ ಕುಳಿತು ಜನರಿಂದ ಆಯಾ ಕಂಪೆನಿಗಳಿಗೆ ಸಂಬಂಧಿಸಿದ ದೂರುಗಳನ್ನು ಪಡೆದುಕೊಂಡು ಅದನ್ನು ಪಟ್ಟಿ ಮಾಡಿ ಕೇಂದ್ರದ ಪೆಟ್ರೋಲಿಯಂ ಸಚಿವರಿಗೆ ರವಾನಿಸಿದೆವು.
ಪೆಟ್ರೋಲಿಯಂ ಸಚಿವರು, ಪ್ರತಿಯೊಂದು ಕಂಪೆನಿಯ ಮುಖ್ಯಸ್ಥರಿಗೆ ಪತ್ರ ಬರೆದು ಪ್ರತಿ ಕಂಪೆನಿಯು ತನ್ನ ಚೀಫ್ ವಿಜಿಲೆನ್ಸ್ ಅಧಿಕಾರಿಯನ್ನು ಮಂಗಳೂರಿಗೆ ಕಳುಹಿಸಿದರು. ಆಗ ನಮ್ಮ ಹೋರಾಟಕ್ಕೆ ಸಂಪೂರ್ಣ ಬಲ ಬಂದಂತಾಯಿತು.
ಇಂಡಿಯನ್ ಆಯಿಲ್ ಸಂಸ್ಥೆಯ ವಿತರಕರು ತಮ್ಮ ಇನ್ನೊಂದು ಸಂಸ್ಥೆಯ ಮೂಲಕ ಸ್ಟವ್ ಮಾರುತ್ತಿದ್ದರು. ಕಂಪೆನಿಯ ಸೀನಿಯರ್ ಅಧಿಕಾರಿಯೊಬ್ಬರ ಪತ್ನಿಯೇ ಆ ಸ್ಟವ್ ಮಾರಾಟದಲ್ಲಿ ತೊಡಗಿರುವುದೂ ಬೆಳಕಿಗೆ ಬಂತು. ಪ್ರತಿಯೊಂದು ಕಂಪೆನಿಯ ಚೀಫ್ ವಿಜಿಲೆನ್ಸ್ ಅಧಿಕಾರಿಯ ತಪಾಸಣೆ ವೇಳೆ ಡೀಲರ್ಗಳು ಒಬ್ಬರಿಗೊಬ್ಬರು ತಪ್ಪಿಸಿಕೊಳ್ಳಲಾರಂಭಿಸಿದರು. ಹಾಗಾಗಿ ಒಂದಕ್ಕೊಂದು ಪೂರಕವಾಗಿ ಕಾರ್ಯನಿರ್ವಹಿಸುತ್ತಿದ್ದ ಆ ಜಾಲವು ಒಡೆದು ಹೋಯಿತು. ಇದು ನಮಗೆ ಬಳಕೆದಾರರ ಶಿಕ್ಷಣ ಟ್ರಸ್ಟ್ ಮೂಲಕ ನಡೆದ ಹೋರಾಟಕ್ಕೆ ಸಿಕ್ಕಿದ ಪ್ರಮುಖ ಜಯವಾಗಿತ್ತು.
ಇದಾದ ಮೇಲೆ ಕಂಪೆನಿಗಳು ‘ಕ್ಯಾಶ್ ಆ್ಯಂಡ್ ಕ್ಯಾರೀ’ ಯೋಜನೆ ಆರಂಭಿಸಿದವು. ಆದ್ಯತೆ ಮೇರೆಗೆ ಅಡುಗೆ ಅನಿಲ ಸಂಪರ್ಕ ನೀಡುವುದು ಈ ಯೋಜನೆ. ಯೋಜನೆಗೆ ಸೇರಿದರೆ ಗ್ಯಾಸ್ ನಿಮ್ಮ ಮನೆಗೆ ಬರುವುದಿಲ್ಲ. ಆದರೆ ನೀವೇ ಹೋಗಿ ಅನಿಲ ಪಡೆಯಬೇಕು. ಅದಕ್ಕೆ ರಿಯಾಯಿತಿ ಸಿಗುತ್ತದೆ. ಮತ್ತೆ ಆದ್ಯತೆ ಮೇರೆಗೆ ನೀಡಲಾಗುತ್ತದೆ. ನಿಮ್ಮ ಸ್ಟವ್ಗೆ ಸಿಲಿಂಡರನ್ನು ನೀವೇ ಜೋಡಿಸಬೇಕು. ಆದರೆ ಪೆಟ್ರೋಲಿಯಂ ಕಂಪೆನಿಯ ನಿಯಮದ ಪ್ರಕಾರ ಅದಕ್ಕಾಗಿ ಕಂಪೆನಿಯಿಂದ ನುರಿತ ಸಿಬ್ಬಂದಿಗಳಿಂದಲೇ ಸ್ಟವ್ಗೆ ಅನಿಲ ಸಿಲಿಂಡರ್ ಜೋಡಿಸಬೇಕು ಎಂಬುದಾಗಿತ್ತು. ಆದರೆ ಈ ಕ್ಯಾಶ್ ಆ್ಯಂಡ್ ಕ್ಯಾರಿ ಯೋಜನೆ ಮೂಲಕ ಕಂಪೆನಿಯು, ಏಜೆನ್ಸಿಗೆ ನೇರವಾಗಿ ಬಂದು ಅಡುಗೆ ಅನಿಲ ಸಿಲಿಂಡರ್ ಖರೀದಿಸುವವರ ಕೈಯಿಂದ ಹೇಳಿಕೆಯೊಂದನ್ನು ಪಡೆಯುತ್ತಿತ್ತು. ಅದರ ಪ್ರಕಾರ ‘‘ಅಡುಗೆ ಅನಿಲ ಸಿಲಿಂಡರ್ ಜೋಡಣೆಯ ವೇಳೆ ಏನಾದರೂ ಹೆಚ್ಚು ಕಡಿಮೆ ಆದರೆ ಅದಕ್ಕೆ ನಾವೇ ಜವಾಬ್ದಾರರು’’ ಎಂದು ಮುಚ್ಚಳಿಕೆಯನ್ನು ಗ್ರಾಹಕ ನೀಡಬೇಕಾಗಿತ್ತು. ಈ ಬಗ್ಗೆ ನಾವು ಮತ್ತೆ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಬರೆದು ಈ ಅಪಾಯಕಾರಿ ಸನ್ನಿವೇಶವನ್ನು ಮನವರಿಕೆ ಮಾಡಿದೆವು. ಇದರಿಂದ ಆ ಕ್ಯಾಶ್ ಆ್ಯಂಡ್ ಕ್ಯಾರಿ ಯೋಜನೆ ನಿಂತು ಹೋಯಿತು.
ಸ್ಟವ್ ಖರೀದಿ ಕಡ್ಡಾಯ ಮಾಡು ವುದು ನಿಯಮ ಬಾಹಿರ. ಈ ವಿರುದ್ಧವೂ ನಮ್ಮ ಸಮರವನ್ನು ಮುಂದುವರಿಸಲಾಯಿತು. ವಾಹನಗಳಿಗೆ ಪೆಟ್ರೋಲ್ ಹಾಕಲು ಹೋದಾಗ, ಆ ಬಂಕ್ನವರು ನೀವು ವಾಹನವನ್ನೂ ಇಲ್ಲೇ ಖರೀದಿಸಬೇಕೆಂದರೆ ಅದು ಸಾಧ್ಯವೇ? ಹಾಗೆಯೇ ಅಡುಗೆ ಅನಿಲ ಸಂಪರ್ಕದ ವೇಳೆ ಸ್ಟವ್ ಖರೀದಿಸಬೇಕೆಂಬ ನಿಯಮ ಕೂಡಾ ಕಾನೂನು ಬಾಹಿರ ಎಂಬುದು ನಿರ್ಬಂಧಿತ ವಾಣಿಜ್ಯ ವ್ಯವಹಾರ ಎಂದು ಪೆಟ್ರೋಲಿಯಂ ಸಚಿವಾಲಯಕ್ಕೆ ಮತ್ತೆ ಪತ್ರ ಬರೆದೆವು. ಅದಕ್ಕೆ ಪೂರಕವಾಗಿ ಯಾವುದೇ ರೀತಿಯಲ್ಲಿ ಸ್ಟವ್ ಖರೀದಿ ಕಡ್ಡಾಯಗೊಳಿಸದಂತೆ ಈಗ ಏಜೆನ್ಸಿಗಳಲ್ಲಿ ಆ ಬಗ್ಗೆ ಘೋಷಣೆಯನ್ನು ಹಾಕಲಾಗಿದೆ.
ಈ ನಡುವೆ, ಇಂಡಿಯನ್ ಆಯಿಲ್ ಕಂಪೆನಿಯ ಡೆಪ್ಯುಟಿ ಸೇಲ್ ಅಧಿಕಾರಿ ಆತನ ಪತ್ನಿ ಹೆಸರಿನಲ್ಲಿ ಇಲ್ಲಿ ವಿತರಕ ಕಂಪೆನಿಯೊಂದು ಕಾರ್ಯನಿರ್ವಹಿಸುತ್ತಿತ್ತು. ಆತ ನಮ್ಮಲ್ಲಿಗೆ ಬಂದು ವಿತರಕರ ಪರವಾಗಿ ಮಾತನಾಡುತ್ತಾ, ನಿಮ್ಮೆಲ್ಲಾ ಸಮಸ್ಯೆಗಳು ಪರಿಹಾರವಾಗಿದೆ. ಯಾವುದೇ ಸಮಸ್ಯೆಗಳು ಇಲ್ಲ ಎಂದು ನೀವು ಪತ್ರ ಬರೆಯಬೇಕು. ನೀವು ಬರೆದಿರುವ ಪತ್ರ ಸಮರ್ಪಕವಾಗಿಲ್ಲ. ನಾನು ಹೇಳುತ್ತೇನೆ, ಆ ರೀತಿಯಲ್ಲಿ ಬರೆಯಿರಿ ಎಂದ. ನಾನೂ ವಿನಯಪೂರ್ವಕವಾಗಿ ಆತನಲ್ಲಿ ‘‘ಹೇಗೆ ಬರೆಯಬೇಕು’’ ಎಂದು ಕೇಳಿದೆ. ಆತ ಹೇಳಿದ. ಅದನ್ನು ಲಿಖಿತವಾಗಿ ಬರೆದುಕೊಡುವಂತೆ ತಿಳಿಸಿದೆ. ಆತ ಹಾಗೆಯೇ ಮಾಡಿದ. ನಾನದನ್ನು ನನ್ನ ಜೇಬಿನಲ್ಲಿರಿಸಿದೆ. ‘‘ಪತ್ರ ಬರೆಯಲು ನೀವು ನಮಗೆ ಹೇಳಿಕೊಡಬೇಕಾಗಿಲ್ಲ. ನಿಮ್ಮ ಕಾರ್ಯದರ್ಶಿ ಅಥವಾ ಇತರ ಅಧಿಕಾರಿಗಳಿಗೆ ನೀವು ಡಿಕ್ಟೇಟ್ ಮಾಡಬಹುದು. ನಮಗೆ ಪತ್ರ ಹೇಗೆ ಬರೆಯಬೇಕೆಂದು ಗೊತ್ತಿದೆ’’ ಎಂದು ಹೇಳಿ ಆತನನ್ನು ಕಳುಹಿಸಿದೆವು. ಆಗ ಆತನಿಗೆ ಆತ ಮಾಡಿದ ಪ್ರಮಾದದ ಬಗ್ಗೆ ಅರಿವಾಗಿ, ತಪ್ಪೊಪ್ಪಿಕೊಂಡ. ಕೆಲ ಸಮಯದ ಬಳಿಕ ಆತನ ಪತ್ನಿ ನಡೆಸುತ್ತಿದ್ದ ವಿತರಕ ಏಜೆನ್ಸಿ ನಿಂತು ಹೋಯಿತು. ಹೀಗೆ ಹೋರಾಟದ ನಡುವೆ ಸಾಕಷ್ಟು ಅಡೆತಡೆಗಳ ಜತೆಗೆ ಕೆಲವೊಂದು ಕುತೂಹಲ ಕಾರಿ ಸಂಗತಿಗಳೂ ನಡೆದು ಹೋಯಿತು. ನಮ್ಮ ಹೋರಾಟ ಜನಸಾಮಾನ್ಯರಿಗೆ ನೆಮ್ಮದಿಯನ್ನು ನೀಡಿದರೆ, ಕಂಪೆನಿ ಹಾಗೂ ಏಜೆನ್ಸಿಗಳ ಪಾಲಿಗೆ ನುಂಗಲಾರದ ತುತ್ತಾಗಿಯೂ ಪರಿಣಮಿತ್ತು.
ಹೀಗೆ ನಮ್ಮ ಹೋರಾಟ ಮುಂದುವರಿದು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಿತಿಯನ್ನೂ ಮಾಡಲಾಯಿತು. ಆ ಸಮಿತಿಯಲ್ಲಿ ನಾನೂ ಇದ್ದೆ. ಹೀಗೆ ಅಡುಗೆ ಅನಿಲಕ್ಕೆ ಸಂಬಂಧಿಸಿ ಇದ್ದ ಹಲವಾರು ನ್ಯೂನತೆಗಳು, ದೋಷಗಳು, ಒತ್ತಡಗಳು ಬಹಳಷ್ಟು ಪರಿಹಾರಗೊಂಡಿವೆ.