ದಾವೂದ್ ಹಾಜಿ
ಬೆಳ್ತಂಗಡಿ, ಎ.26: ಬೆಳ್ತಂಗಡಿಯ ಹಿರಿಯ ಉದ್ಯಮಿ ದಾವೂದ್ ಹಾಜಿ(60) ಗುರುವಾರ ನಿಧನರಾಗಿದ್ದಾರೆ.
ಅವರು ಅಲ್ಪಕಾಲದ ಅಸೌಖ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಅನಿವಾಸಿ ಭಾರತೀಯ ಉದ್ಯಮಿಯಾಗಿದ್ದ ದಾವೂದ್ ಹಾಜಿ ತಾಲೂಕಿನಲ್ಲಿ ವಿವಿಧೆಡೆಗಳಲ್ಲಿ ಮಸೀದಿ, ಮದ್ರಸ ಹಾಗೂ ಬಡವರಿಗೆ ಮನೆಗಳನ್ನು ನಿರ್ಮಿಸಿ ನೀಡಿರುವ ದಾನಿಯಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
Next Story