ಮೈತ್ರಿ
ಮರವೊಂದು ಕೊಡಲಿಯ ಪರವಾಗಿ ಚುನಾವಣಾ ಪ್ರಚಾರ ಮಾಡುತ್ತಿತ್ತು.
ಸಂತ ಕೇಳಿದ ‘‘ಮರವೇ ಕೊಡಲಿ ಇರುವುದೇ ಮರವನ್ನು ಕತ್ತರಿಸಲು. ಮತ್ತೇಕೆ ನೀನು ಅದಕ್ಕೆ ಮತ ಹಾಕುತ್ತಿದ್ದೀಯ?’’
ಮರ ವಾದಿಸಿತು ‘‘ನೀನು ಸುಳ್ಳು ಹೇಳುತ್ತಿದ್ದೀಯ. ಕೊಡಲಿಯ ಹಿಡಿ ಮರದಿಂದ ಮಾಡಿರುವುದು ಮತ್ತು ಅದರ ಅತಿ ದೊಡ್ಡ ಭಾಗ ಮರವೇ ಆಗಿದೆ. ಕೊಡಲಿ ಮರದ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಆದುದರಿಂದ ನಮ್ಮ ಸಮುದಾಯಕ್ಕೆ ನನ್ನ ಮತ’’
Next Story