ಭಾರತದ ಎರಡನೇ ರಾಷ್ಟ್ರಪತಿಯಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್
ಈ ದಿನ
► 1811: ಪರಾಗ್ವೆ ಸ್ಪೇನ್‌ನಿಂದ ಮುಕ್ತಗೊಂಡು ಸ್ವತಂತ್ರ ದೇಶವಾಯಿತು.
► 1931: ಸ್ವಾತಂತ್ರಕ್ಕಾಗಿ ಒತ್ತಾಯಿಸಿ ವಿದೇಶಿ ವಸ್ತುಗಳ ಬಹಿಷ್ಕಾರ ಚಳವಳಿ ನಡೆಸಿದ್ದ ಗಾಂಧೀಜಿ ಬ್ರಿಟಿಷರೊಂದಿಗೆ ಮಾತುಕತೆಗೆ ಲಂಡನ್‌ಗೆ ತೆರಳಲು ಒಪ್ಪಿಕೊಂಡರು. 1948: ಇಸ್ರೇಲ್ ಸ್ವತಂತ್ರ ದೇಶದ ಘೋಷಣೆ ಇಂದು ಹೊರಬಿತ್ತು. ಫೆಲೆಸ್ತೀನ್‌ನಲ್ಲಿ ಬ್ರಿಟಿಷ್ ಆಡಳಿತ ಕೊನೆಗೊಂಡ ತರುವಾಯ ಈ ಘೋಷಣೆಯನ್ನು ಹೊರಡಿಸಲಾಯಿತು.
►1955: ಮೂರು ದಿನಗಳ ಕಾಲ ನಡೆದ ಸಭೆಯ ನಂತರ ಪೋಲೆಂಡ್‌ನ ರಾಜಧಾನಿ ವಾರ್ಸಾದಲ್ಲಿ ಸೋವಿಯತ್ ಒಕ್ಕೂಟ ಮತ್ತು ಅದರ ಪೌರಾತ್ಯ ಒಕ್ಕೂಟದ ರಾಷ್ಟ್ರಗಳಾದ ಪೋಲೆಂಡ್, ಪೂರ್ವ ಜರ್ಮನಿ, ಝೆಕೊಸ್ಲೊವಾಕಿಯಾ, ಹಂಗರಿ, ರೋಮಾನಿಯಾ, ಬಲ್ಗೇರಿಯಾ ಮತ್ತಿತರ ರಾಷ್ಟ್ರಗಳು ಭದ್ರತಾ ಒಪ್ಪಂದಕ್ಕೆ ಸಹಿ ಹಾಕಿದವು. ಇದು ಎಂಟು ಕಮ್ಯುನಿಸ್ಟ್ ರಾಷ್ಟ್ರಗಳ ಮಧ್ಯೆ ಸೈನಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಐಕ್ಯತೆ ಒದಗಿಸಿತು.
►1962: ಭಾರತದ ಎರಡನೇ ರಾಷ್ಟ್ರಪತಿಯಾಗಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅಧಿಕಾರ ವಹಿಸಿಕೊಂಡರು. 1963: ಕುವೈತ್ ರಾಷ್ಟ್ರವು ವಿಶ್ವಸಂಸ್ಥೆಗೆ ಸೇರ್ಪಡೆಯಾಯಿತು.
► 1964: ಈಜಿಪ್ಟ್‌ನ ಆಸ್ವಾನ್ ಅಣೆಕಟ್ಟಿಗೆ ಆರ್ಥಿಕ ಸಹಾಯ ಮಾಡಲು ಅಮೆರಿಕ ನಿರಾಕರಿಸಿದಾಗ ಈಜಿಪ್ಟ್ ಅಧ್ಯಕ್ಷ ಗಮಾಲ್ ಅಬ್ದುಲ್ ನಾಸರ್ ರಶ್ಯಾದ ನಾಯಕ ನಿಕಿತಾ ಕ್ರುಶ್ಚೆವ್‌ರ ಸಹಾಯದೊಂದಿಗೆ ಈ ದಿನ ಅಣೆಕಟ್ಟು ಯೋಜನೆಯನ್ನು ಆರಂಭಿಸಿದರು. ನೈಲ್ ನದಿ ತಿರುವಿನ ಯೋಜನೆಯಾದ ಇದು 1971ರಲ್ಲಿ ಕೊನೆಗೊಳ್ಳುವ ಮೂಲಕ ಈಜಿಪ್ಟ್‌ನಮೂರರಲ್ಲಿ ಒಂದು ಭಾಗದಷ್ಟು ಭೂಮಿಗೆ ನೀರಾವರಿ ಒದಗಿಸಿದೆ. ಅಲ್ಲದೆ ವಿಶ್ವದ ಅತ್ಯಂತ ದೊಡ್ಡ ಮಾನವ ನಿರ್ಮಿತ ಸರೋವರ ‘ನಾಸರ್ ಸರೋವರ’ (ಲೇಕ್ ನಾಸರ್)ವನ್ನು ನಿರ್ಮಿಸಿದೆ.
►1982: ಗಿನಿಯಾ ದೇಶದಿಂದ ಸಂವಿಧಾನ ಅಂಗೀಕಾರ.
►1991: ಜಪಾನ್‌ನಲ್ಲಿ ರೈಲುಗಳ ನಡುವೆ ನಡೆದ ಢಿಕ್ಕಿಯಲ್ಲಿ 42 ಜನ ಮೃತಪಟ್ಟ ಘಟನೆ ವರದಿಯಾಗಿದೆ.
2013: ನೈಜೀರಿಯಾದ ಖ್ಯಾತ ಲೇಖಕಿ ಚಿಮಮಂದಾ ಗೋಝಿ ಅಡಿಚೆ ಅವರ ಕಾದಂಬರಿ ‘ಅಮೆರಿಕನಾಹ್’ ಪ್ರಕಟಗೊಂಡಿತು.