‘‘ನಾನು ನನ್ನ ಕನಸಿನಂತೆಯೇ ನನ್ನ ಮಗನನ್ನು ಬೆಳೆಸಿದೆ’’ ತಂದೆ ಸಾರ್ಥಕತೆಯಿಂದ ಹೇಳಿದ.
ಅದನ್ನು ಕೇಳಿದ ಸಂತ ನಿಟ್ಟುಸಿರಿಟ್ಟು ಹೇಳಿದ ‘‘ಹಾಗಾದರೆ ನಿಮ್ಮ ಮಗನ ಕನಸುಗಳನ್ನು ಕೊಂದು ಹಾಕಿದಿರೆಂದು ಅರ್ಥ’’
ತಂದೆ ವಿಷಾದದಿಂದ ಪ್ರತಿ ಉತ್ತರಿಸಿದ ‘‘ಅವನ ಕನಸನ್ನು ಬಹುಶಃ ಅವನು ಅವನ ಮಗನ ಕನಸುಗಳನ್ನು ಕೊಲ್ಲುವ ಮೂಲಕ ಈಡೇರಿಸಬಹುದು’’