‘‘ಗುರುಗಳೇ ನಗರಕ್ಕೆ ಹೋಗಲು ನೀವು ಹೆದರುವುದು ಯಾಕೆ?’’ ಶಿಷ್ಯ ಕೇಳಿದ.
‘‘ಅಲ್ಲಿ ಒಮ್ಮೆ ಹೋದರೆ, ಮರಳಿ ಬರುವ ದಾರಿ ತಪ್ಪಬಹುದು ಎಂಬ ಭಯ’’ ಸಂತ ಹೇಳಿದ.
‘‘ಇನ್ನೊಬ್ಬರಲ್ಲಿ ದಾರಿ ಕೇಳಿಕೊಂಡು ಬಂದರಾಯಿತು....’’ ಶಿಷ್ಯ ಪರಿಹಾರ ಸೂಚಿಸಿದ.
‘‘ಇನ್ನೊಬ್ಬರಿಗೆ ಹಳ್ಳಿಯ ದಾರಿ ಗೊತ್ತಿದೆ ಎಂದಾಗಿದ್ದರೆ ಅವರೇಕೆ ನಗರದಲ್ಲೇ ಉಳಿಯುತ್ತಿದ್ದರು....?’’ ಸಂತ ಕೇಳಿದ.