ವಾಟ್ಸ್ಯಾಪ್ ಗ್ರೂಪ್ ಅಡ್ಮಿನ್ ಗಳಿಗಾಗಿ ಹೊಸ ಫೀಚರ್
ವಾಟ್ಸ್ಯಾಪ್ ಗ್ರೂಪ್ ಅಡ್ಮಿನ್ ಗಳು ತಮ್ಮ ಗ್ರೂಪ್ ಗಳ ಸದಸ್ಯರರ ಮೇಲೆ ಹೆಚ್ಚಿನ ನಿಯಂತ್ರಣ ಹೊಂದುವಂತಾಗಲು ವಾಟ್ಸ್ಯಾಪ್ ಹೊಸ ಫೀಚರ್ ಒಂದನ್ನು ಹೊರ ತಂದಿದೆ. ಈ ಫೀಚರ್ ಆ್ಯಂಡ್ರಾಯ್ಡ್ ಗಾಗಿ ವಾಟ್ಸ್ಯಾಪ್ ಬೇಟಾ ವರ್ಷನ್ 2.18.201 ಹಾಗೂ ಐಫೋನ್ ಗಳಿಗಾಗಿ 2.18.70 ವರ್ಷನ್ ನಲ್ಲಿ ಲಭ್ಯವಿದೆ. ಗ್ರೂಪ್ ನ ಸದಸ್ಯರು ಗ್ರೂಪ್ ನೊಳಗೆ ಸಂದೇಶ ಕಳುಹಿಸುವಾಗ ಅವರ ಮೇಲೆ ಅಡ್ಮಿನ್ ಗಳು ನಿಯಂತ್ರಣವನ್ನು ಈ ಫೀಚರ್ ಮೂಲಕ ಹೊಂದಬಹುದಾಗಿದೆ.
ಇದರನ್ವಯ ಗ್ರೂಪ್ ಸೆಟ್ಟಿಂಗ್ಸ್ ಮೆನುವಿನಲ್ಲಿ ಹೊಸ ಆಪ್ಶನ್-ಸೆಂಡ್ ಮೆಸೇಜಸ್ ಇರುತ್ತದೆ. ಗ್ರೂಪ್ ಸೆಟ್ಟಿಂಗ್ಸ್ ನಲ್ಲಿ ಈ ಹಿಂದೆ ಇದ್ದ ಎಡಿಟ್ ಗ್ರೂಪ್ ಇನ್ಫೋದ ಜತೆ ಈ ಹೊಸ ಫೀಚರ್ ಲಭ್ಯವಾಗಲಿದೆ- ಅದರಲ್ಲಿ ಎಲ್ಲಾ ಪಾರ್ಟಿಸಿಪೆಂಟ್ಸ್ ಹಾಗೂ ಓನ್ಲಿ ಅಡ್ಮಿನ್ ಎಂದು ಇಲ್ಲಿ ಬರೆಯಲಾಗಿದೆ. ಗ್ರೂಪ್ ಒಂದರಲ್ಲಿ ಒಬ್ಬನೇ ಅಡ್ಮಿನ್ ಇದ್ದರೂ ಈ ಫೀಚರ್ ಲಭ್ಯವಿರುತ್ತದೆ. ಇದರ ಹೊರತಾಗಿ ಎಲ್ಲಾ ಗ್ರೂಪ್ ಸದಸ್ಯರಿಗೂ ಬ್ರಾಡ್‍ಕಾಸ್ಟ್ ಟೆಕ್ಸ್ಟ್ ಮೆಸೇಜ್ ಗಳ ಮೂಲಕ ಹೊಸ ಬೆಳವಣಿಗೆಯ ಬಗ್ಗೆ ತಿಳಿಸಲಾಗುತ್ತದೆ.
ಈ ಫೀಚರ್ ಎಲ್ಲಾ ವಿಂಡೋಸ್ ಫೋನ್ ಗಳಿಗೆ ಹಾಗೂ ಆಂಡ್ರಾಯ್ಡ್ ವರ್ಷನ್ 2.18.191 ಬಳಕೆದಾರರಿಗೆ ಸದ್ಯವೇ ಲಭ್ಯವಾಗಲಿದೆ.